– ಸ್ವಚ್ಛತಾ ಕಾರ್ಯಕ್ಕೆ ಚಾಲನೆ ಕೊಟ್ಟ ಸಿಎಂ ಯೋಗಿ ಆದಿತ್ಯನಾಥ್
– ಕುಂಭಮೇಳಕ್ಕೆ 16,000 ರೈಲುಗಳ ಓಡಾಟ
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. 45 ದಿನಗಳ ಅವಧಿಯಲ್ಲಿ ಒಟ್ಟು 66 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಿಂದಿದ್ದು ಪುನೀತರಾಗಿದ್ದಾರೆ. ಕಾರ್ಯಕ್ರಮದ ಬೆನ್ನಲ್ಲೇ ಸ್ವಚ್ಛತಾ ಅಭಿಯಾನ ಶುರುವಾಗಿದೆ.
Advertisement
144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ ಕಳೆದ ಜನವರಿ 13 ರಿಂದ ಶುರವಾಗಿ ನಿನ್ನೆ ಶಿವರಾತ್ರಿ ಪವಿತ್ರ ದಿನದಂದು ಅಂತ್ಯವಾಗಿದೆ. 45 ದಿನಗಳ ಕಾಲ ನಡೆದ ಈ ಮಹಾಕುಂಭ ಮೇಳದಲ್ಲಿ 66 ಕೋಟಿ ಜನರು ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ನಿನ್ನೆಗೆ ಮಹಾಕುಂಭ ಮೇಳ ಅಂತ್ಯವಾಗಿದ್ದರೂ ಇನ್ನು ಜನಸಾಗರ ಸಂಗಮಕ್ಕೆ ಹರಿದು ಬರುತ್ತಿದ್ದು, ಇನ್ನೂ ಕೆಲ ದಿನಗಳು ಈ ಬೆಳವಣಿಗೆ ನಡೆಯಲಿದೆ.
Advertisement
ಮಹಾ ಕುಂಭಮೇಳ ಅಂತ್ಯವಾದ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅರೈಲ್ ಘಾಟ್ ತಲುಪಿದ ಅವರು ತಾತ್ಕಲಿವಾಗಿ ನಿರ್ಮಾಣ ಮಾಡಿದ್ದ ಟೆಂಟ್ ಸಿಟಿಯ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
Advertisement
ಸ್ವಚ್ಛತಾ ಕಾರ್ಯದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಾ ಕುಂಭಮೇಳದಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು, ಉದ್ಯೋಗಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳನ್ನು ಸನ್ಮಾನಿಸಿದರು. ಇದೇ ವೇಳೆ ಮಹಾಕುಂಭ ಮೇಳದ ಸಮಯದಲ್ಲಿ ದಾಖಲಾದ ನಾಲ್ಕು ವಿಶ್ವ ದಾಖಲೆಗಳಿಗೆ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.
Advertisement
ರೈಲ್ವೆ ಸಿಬ್ಬಂದಿ ಭೇಟಿಯಾದ ಸಚಿವ ಅಶ್ವನಿ ವೈಷ್ಣವ್
ಮಹಾ ಕುಂಭಮೇಳ ಅಂತ್ಯವಾದ ಬೆನ್ನಲ್ಲೇ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಪ್ರಯಾಗ್‌ರಾಜ್ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ಮತ್ತು ಇತರ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭೇಟಿಯಾಗಿ ಅಭಿನಂದಿಸಿದರು. ರೈಲ್ವೆ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಷಿಸಿದರು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಇಂತಹ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಲ್ಲರ ಸಹಕಾರದಿಂದ ನಾವು ನಿಕಟ ಸಮನ್ವಯದಿಂದಾಗಿ 13,000 ರೈಲುಗಳ ಬದಲು 16,000 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ಸಾಧ್ಯವಾಯಿತು. 45 ದಿನಗಳಲ್ಲಿ ಭಕ್ತರಿಗೆ ನಿರ್ವಹಣೆಯ ವಿಷಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನಾವು ಖಚಿತಪಡಿಸಿಕೊಂಡಿದ್ದೇವೆ ಎಂದರು.