– 6,700 ರೂ. ನಿಂದ 30 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶ
– ಬೆಂಗಳೂರಿನ ಖಾಲಿ ಸೈಟ್ ಮಾಲೀಕರಿಗೆ ಜಿಬಿಎ ಎಚ್ಚರಿಕೆ
ಬೆಂಗಳೂರು: ನಗರದ ಖಾಲಿ ಸೈಟ್ ಮಾಲೀಕರು (Empty Site owners) ನೋಡಲೇಬೇಕಾದ ಸ್ಟೋರಿ ಇದು. ನಿಮ್ಮ ಖಾಲಿ ಸೈಟ್ ನಲ್ಲಿ ತ್ಯಾಜ್ಯಗಳನ್ನ ಹಾಕಿದ್ದೀರಾ? ಒಂದು ವೇಳೆ ಹಾಕಿದ್ದರೆ ಆ.15ರ ಒಳಗೆ ಸ್ವಚ್ಚಗೊಳಿಸಿ, ಇಲ್ಲದಿದ್ರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ದಂಡದ ಬಿಸಿ ಮುಟ್ಟಿಸಲಿದೆ.
ಸ್ವಾತಂತ್ರ್ಯ ದಿನಚಾರಣೆ ಹಿನ್ನೆಲೆ ನಗರವನ್ನ ಸ್ವಚ್ಛವಾಗಿಸುವ ಕಾರ್ಯ ಕೈಗೊಂಡಿರೋ ಜಿಬಿಎ, ನಗರದ ಖಾಲಿ ಸೈಟ್ ಗಳ ಸ್ವಚ್ಚತೆಗೂ ಮುಂದಾಗಿದೆ. ನಗರದ ಹಲವು ಕಡೆ ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದು, ಅಶುಚಿತ್ವ ತಾಂಡವವಾಡುತ್ತಿರುವ ಹಿನ್ನೆಲೆ, ಎಚ್ಚೆತ್ತಿರೋ ಜಿಬಿಎ ಅಧಿಕಾರಿಗಳು ʻಕಸದಿಂದ ಸ್ವಾತಂತ್ರ್ಯʼ ಅಭಿಯಾನ ಕಾರ್ಯಕ್ರಮದಡಿ ಖಾಲಿ ಸೈಟುಗಳ ಸ್ವಚ್ಚತೆಗೆ ಕರೆ ನೀಡಿದೆ.
ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳನ್ವಯ, ನಗರದ ಖಾಲಿ ನಿವೇಶನಗಳನ್ನ ಸ್ವಚ್ಛ ಹಾಗೂ ನೈರ್ಮಲ್ಯಯುತ ಸ್ಥಿತಿಯಲ್ಲಿ ನಿರ್ವಹಿಸುವುದು ಸಂಬಂಧಪಟ್ಟ ನಿವೇಶನ ಮಾಲೀಕರ ಕಡ್ಡಾಯ ಜವಾಬ್ದಾರಿ. ಆದರೆ ಹಲವು ಕಡೆ ಮಾಲೀಕರು ಜವಬ್ದಾರಿ ಮರೆತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಖಾಲಿ ನಿವೇಶನಗಳ ಮಾಲೀಕರು ಆ.15 ರ ಒಳಗಾಗಿ ತಮ್ಮ ನಿವೇಶನವನ್ನ ಸ್ವಚ್ಛಗೊಳಿಸಿ, ನಗರ ಪಾಲಿಕೆಯ ವತಿಯಿಂದ ಗುರುತಿಸಲಾದ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಒಂದೊಮ್ಮೆ ಅಷ್ಟರೊಳಗೆ ಸ್ವಚ್ಛವಾಗಿಡದೇ ಇದ್ದರೆ, ಪಾಲಿಕೆ ವತಿಯಿಂದಲೇ ತ್ಯಾಜ್ಯ ತೆರವು ಕಾರ್ಯ ಆಗಲಿದೆ. ಆದರೆ ಅದಕ್ಕೆ ಮಾಲೀಕರು ಜಿಬಿಎ ಫಿಕ್ಸ್ ಮಾಡುವ ಹಣ ಪಾವತಿಸಿ, ಸ್ವಚ್ಚಮಾಡಿಸಬೇಕಾಗಲಿದೆ.

ಕ್ಲೀನ್ ಮಾಡಿದ್ರೆ ದಂಡ ಕಟ್ಟೋರೆ ರೆಡಿಯಾಗಿ
ಇದೇ 15 ರೊಳಗೆ ತ್ಯಾಜ್ಯ ತೆರವಾಗದಿದ್ದರೆ, ಖುದ್ದು ಜಿಬಿಎ ಅಧಿಕಾರಿಗಳೇ ನಿಮ್ಮ ಖಾಲಿ ನಿವೇಶನದ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಲಿದ್ದಾರೆ. ತ್ಯಾಜ್ಯ ತೆರವುಗೊಳಿಸಿ, ಸ್ವಚ್ಛತಾ ವೆಚ್ಚ ಹಾಗೂ ತ್ಯಾಜ್ಯ ಸಾಗಾಣಿಕೆ ವೆಚ್ಚವನ್ನ ಸಂಬಂಧಪಟ್ಟ ನಿವೇಶನ ಮಾಲೀಕರಿಂದ ವಸೂಲಿ ಮಾಡಲಾಗುತ್ತದೆ. ಆಯಾ ಆಯಾ ಸೈಟ್ ಗಳ ಅಳತೆಗೆ ಆಧಾರದ ಮೇಲೆ ಪ್ರತೇಕ ವೆಚ್ಚಗಳನ್ನ ಈಗಾಗಲೇ ನಿಗದಿಪಡಿಸಲಾಗಿದೆ. ನಿಗದಿಯಾದ ವೆಚ್ಚವನ್ನ ಜಿಬಿಎ ಸ್ವಚ್ಛಗೊಳಿಸಿದ ಜಾಗಕ್ಕೆ ಪಾವತಿ ಮಾಡಲೇಬೇಕಾಗುತ್ತದೆ.
ಖಾಲಿ ನಿವೇಶನಗಳ ಸ್ವಚ್ಚಗೊಳಿಸಲು ತಗಲುವ ವೆಚ್ಚ ಎಷ್ಟು?
– 20×30 = 600 ಚ.ಅಡಿ / 55.74 ಚ.ಮೀ. ವೇಶನಕ್ಕೆ ತಗಲುವ ವೆಚ್ಚ.
* ಖಾಲಿ ನಿವೇಶನ (ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 6,700 ರೂ.
* ಖಾಲಿ ನಿವೇಶನ (ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 7,700 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ – 19,200 ರೂ.
– 30×40 = 1,200 ಚ.ಅಡಿ / 111.48 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ:
* ಖಾಲಿ ನಿವೇಶನ (ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 13,400 ರೂ.
* ಖಾಲಿ ನಿವೇಶನ (ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 14,400 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ – 38,400 ರೂ.
– 30×50 = 1,500 ಚ.ಅಡಿ / 139.35 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ:
* ಖಾಲಿ ನಿವೇಶನ (ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 16,750 ರೂ.
* ಖಾಲಿ ನಿವೇಶನ (ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 14,750 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ – 48,000 ರೂ.
– 40×60 = 2,400 ಚ.ಅಡಿ / 222.97 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ:
* ಖಾಲಿ ನಿವೇಶನ (ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 26,800 ರೂ.
* ಖಾಲಿ ನಿವೇಶನ (ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 27,800 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ – 76,800 ರೂ.
– 50×80 = 4,000 ಚ.ಅಡಿ / 371.61 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ:
* ಖಾಲಿ ನಿವೇಶನ (ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 46,700 ರೂ.
* ಖಾಲಿ ನಿವೇಶನ (ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ (0.45 ಮೀ. ಆಳ) – 47,700 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ – 1,28,000 ರೂ.

