ಹೆಚ್ಚು ಖಾರ ಹಾಗೂ ಮಸಾಲೆ ಪದಾರ್ಥಗಳನ್ನು ಇಷ್ಟಪಡದವರು ಹೆಚ್ಚಾಗಿ ನಾನ್ವೆಜ್ ಖಾದ್ಯವನ್ನು ದೂರವಿಡುತ್ತಾರೆ. ಏಕೆಂದರೆ ನಾನ್ವೆಜ್ ಖಾದ್ಯವನ್ನು ಹೆಚ್ಚು ಮಸಾಲೆಯುಕ್ತವಾಗಿಯೇ ಮಾಡಲಾಗುತ್ತದೆ. ಆದರೆ ಬಂಗಾಳದ ಫೇಮಸ್ ಡೋಯಿ ಮಾಚ್ (Doi Maach) ಹಾಗಲ್ಲ. ಕನಿಷ್ಠ ಮಸಾಲೆ ಪದಾರ್ಥಗಳನ್ನು ಬಳಸಿ ಈ ಮೀನು ಸಾರನ್ನು ಮಾಡಲಾಗುತ್ತದೆ. ಡೋಯಿ ಎಂದರೆ ಮೊಸರು ಹಾಗೂ ಮಾಚ್ ಎಂದರೆ ಮೀನು. ಹೆಸರೇ ಹೇಳಿದಂತೆ ಈ ಮೀನು ಸಾರಿಗೆ ಬೇಕಾದ ಮುಖ್ಯ ಪದಾರ್ಥವೇ ಮೊಸರು. ಹಾಗಿದ್ದರೆ ಬೆಂಗಾಲಿ ಸ್ಟೈಲ್ನ ಮೀನು ಸಾರು ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಮ್ಯಾರಿನೇಷನ್ಗೆ:
ಉಪ್ಪು – ಕಾಲು ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಮೀನು – 4-5 ತುಂಡುಗಳು
ಮೊಸರು ಮಿಶ್ರಣಕ್ಕೆ:
ಮೊಸರು – 2 ಕಪ್
ಕಡಲೆ ಹಿಟ್ಟು – ಅರ್ಧ ಟೀಸ್ಪೂನ್
ಈರುಳ್ಳಿ ರಸ – ಅರ್ಧ
ಕರಿ ತಯಾರಿಸಲು:
ಸಾಸಿವೆ ಎಣ್ಣೆ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಗರಂ ಮಸಾಲೆ ಪುಡಿ – ಕಾಲು ಟೀಸ್ಪೂನ್
ತುಪ್ಪ – 1 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಲವಂಗ -2
ಏಲಕ್ಕಿ – 2
ಹಸಿರು ಮೆಣಸಿನಕಾಯಿ – 3
ದಾಲ್ಚಿನಿ – 1 ಇಂಚು ಇದನ್ನೂ ಓದಿ: ಬರೀ 15 ನಿಮಿಷ – ಎಗ್ ಡ್ರಾಪ್ ಸೂಪ್ ಮನೆಯಲ್ಲೇ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮೀನಿನ ತುಂಡುಗಳಿಗೆ ಅರಿಶಿನ ಹಾಗೂ ಉಪ್ಪು ಹಚ್ಚಿ ಮ್ಯಾರಿನೇಟ್ ಮಾಡಿ.
* ಬಾಣಲೆ ಬಿಸಿ ಮಾಡಿ ಸಾಸಿವೆ ಎಣ್ಣೆ ಸೇರಿಸಿ ಅದರಲ್ಲಿ ಮೀನಿನ ತುಂಡುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎರಡೂ ಬದಿ ಫ್ರೈ ಮಾಡಿಕೊಳ್ಳಿ.
* ಈಗ ಬಾಣಲೆಯನ್ನು ತೆಗೆದು ಹೆಚ್ಚುವರಿ ಎಣ್ಣೆಯನ್ನು ಪೇಪರ್ ಟವಲ್ಗೆ ಹರಿಸಿ, ಪಕ್ಕಕ್ಕಿಡಿ.
* ಒಂದು ಬಟ್ಟಲು ತೆಗೆದುಕೊಂಡು, ಅದಕ್ಕೆ ಮೊಸರು ಹಾಕಿ ಕಡಲೆ ಹಿಟ್ಟು ಹಾಗೂ ಈರುಳ್ಳಿ ರಸ ಸೇರಿಸಿ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
* ಈಗ ಮೀನು ಹುರಿದಿಟ್ಟಿದ್ದ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಏಲಕ್ಕಿ, ಕರಿಬೇವಿನ ಎಲೆ, ಲವಂಗ ಹಾಗೂ ದಾಲ್ಚಿನಿ ಸೇರಿಸಿ.
* ಬಳಿಕ ಮೊಸರನ್ನು ಸೇರಿಸಿ, ಮಿಶ್ರಣ ಮಾಡಿ, 1 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
* ರುಚಿಗೆ ತಕ್ಕಷ್ಟು ಉಪ್ಪು ಹಸಿರು ಮೆಣಸಿನಕಾಯಿ ಹಾಗೂ ಗರಂ ಮಸಾಲೆ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.
* ಮೀನನ್ನು ಹೆಚ್ಚು ಬೆರೆಸಬೇಡಿ, ಇದರಿಂದ ಮೀನಿನ ತುಂಡು ಮುರಿಯುವ ಸಾಧ್ಯತೆಯಿರುತ್ತದೆ. ಉರಿಯನ್ನು ಹೆಚ್ಚು ಮಾಡಿ ಮತ್ತೆ 1 ನಿಮಿಷ ಬೇಯಿಸಿಕೊಳ್ಳಿ.
* ಇದೀಗ ಬೆಂಗಾಲಿ ಸ್ಟೈಲ್ ಮೊಸರಿನ ಮೀನು ಸಾರು ತಯಾರಾಗಿದ್ದು, ಬಿಸಿಬಿಸಿ ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿ