ಕಲಬುರಗಿ: ಸ್ವ ಗ್ರಾಮದಲ್ಲೇ ಶಾಸಕ ಅಜಯ್ ಸಿಂಗ್ (Ajay Singh) ಅವರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ (Kalaburagi) ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಧರಮ್ ಸಿಂಗ್ (N.Dharam Singh) ಪುತ್ರ ಶಾಸಕ ಅಜಯ್ ಸಿಂಗ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಲೋಗಿ (Nelogi) ಗ್ರಾಮದ ದಡದಲ್ಲಿರುವ ಭೀಮಾ ನದಿಯಲ್ಲಿ (Bhima River) ಅಕ್ರಮ ಮರಳು ದಂಧೆ (Sand trade) ನಡೆಯುತ್ತಿದ್ದು, ಮರಳುಗಾರಿಕೆ ತಡೆಯುವಂತೆ ರಸ್ತೆಗೆ ಕಲ್ಲು ಅಡ್ಡ ಹಾಕಿ, ಶಾಸಕರ ಕಾರು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುತ್ರ ಸಿಕ್ಕಿಬಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ
ಅಕ್ರಮ ಮರಳುಗಾರಿಕೆ ದಂಧೆಯಿಂದ ರೋಸಿ ಹೋದ ಜನ, ನಮಗೆ ಮನೆಕಟ್ಟಲು ಮರಳು ಕೊಡುತ್ತಿಲ್ಲ. ಬೇರೆಯವರು ಬಂದು ಇಲ್ಲಿ ಮರಳು ದಂಧೆ ಮಾಡುತ್ತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ
ಅಕ್ರಮ ಮರಳುಗಾರಿಕೆ ತಡೆಯಲು ಎಸ್‌ಪಿಗೆ ತಿಳಿಸಲಾಗಿದೆ ಎಂದು ಶಾಸಕ ಅಜಯ್ ಸಿಂಗ್ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ 50 ಟಿಕೆಟ್ ಹೊಸಬರಿಗೆ ಫಿಕ್ಸ್?