ಮುಂಬೈ: ಪೊಲೀಸರಂತೆ ನಟಿಸಿ ದಿನವೊಂದಕ್ಕೆ 5 ರಿಂದ 10 ಕೋಟಿ ರೂ. ದೋಚುತ್ತಿದ್ದ ಸೈಬರ್ ಕ್ರೈಮ್ ಜಾಲವನ್ನು(Cybercriminals) ಮುಂಬೈ (Mumbai) ಪೊಲೀಸರು ಬಯಲಿಗೆಳೆದಿದ್ದಾರೆ.
12ನೇ ತರಗತಿ ಓದಿ, ಉತ್ತಮ ತಾಂತ್ರಿಕ ಜ್ಞಾನ (Technical Knowledge) ಹೊಂದಿದ್ದ ಮಾಸ್ಟರ್ ಮೈಂಡ್ (Mastermind) ಶ್ರೀನಿವಾಸ್ ರಾವ್ ದಾಡಿ (49) ಎಂಬಾತನನ್ನು ಬಂಗೂರ್ ನಗರ ಪೊಲೀಸ್ ಠಾಣೆಯ ತಂಡವು ಹೈದರಾಬಾದ್‍ನ ಹೋಟೆಲ್‍ನಲ್ಲಿ ಬಂಧಿಸಿದೆ. ಅಲ್ಲದೆ ಆತನ ಗ್ಯಾಂಗ್ ಸದಸ್ಯರಾದ ಥಾಣೆಯ ಇಬ್ಬರು ಮತ್ತು ಕೋಲ್ಕತ್ತಾದ (Kolkata) ನಾಲ್ವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ
Advertisement
Advertisement
ಆರೋಪಿಗಳು ದಾಡಿ ಹೆಸರಿನ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವಂತೆ ನಟಿಸುತ್ತಿದ್ದರು. ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದರು. ಅಲ್ಲದೆ ಎನಿಡೆಸ್ಕ್ ಅಪ್ಲಿಕೇಷನ್‍ಗಳನ್ನು ಸಹ ಬಳಸಿದ್ದರು. ಅವರು ಬಳಸಿದ 40 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಬಂಧಿತರಿಂದ 1.5 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಆರೋಪಿಗಳು ಜನರನ್ನು ಸಂಪರ್ಕಿಸಿ ಕೋರಿಯರ್ ಮೂಲಕ ತಮ್ಮ ರಿಯಲ್ ಎಸ್ಟೇಟ್ ಕಛೇರಿಗೆ ದಾಖಲೆಗಳನ್ನು ಕಳಿಸುವಂತೆ ಹೇಳುತ್ತಿದ್ದರು. ಅದರಲ್ಲೂ ಹೆಚ್ಚಾಗಿ ಮಹಿಳೆಯರನ್ನು ಇವರು ಟಾರ್ಗೆಟ್ ಮಾಡುತ್ತಿದ್ದರು. ಅಲ್ಲದೆ ತಮಗೆ ಕಳುಹಿಸಿದ ಕೊರಿಯರ್‍ನಲ್ಲಿ ಪೊಲೀಸರು ಡ್ರಗ್ಸ್ ಅಥವಾ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೆದರಿಸುತ್ತಿದ್ದರು. ಭಯಭೀತರಾದವರಿಂದ ಬ್ಯಾಂಕ್ ಅಥವಾ ಆದಾಯ ತೆರಿಗೆ (Income Tax) ಸಂಬಂಧಿತ ವಿವರಗಳನ್ನು ಪಡೆದು ಖಾತೆಯಲ್ಲಿದ್ದ ಹಣ ಕದಿಯುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತ ಅಜಯ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.
Advertisement
ದರೋಡೆಕೋರರು ಕದ್ದ ಎಲ್ಲಾ ಹಣ ಶ್ರೀನಿವಾಸ್ ರಾವ್ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಗಳಿಗೆ ಸೇರುತ್ತಿತ್ತು. ನಂತರ ಆತ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ (Cryptocurrency) ಪರಿವರ್ತಿಸಿ ಚೀನಾದ ಪ್ರಜೆಗೆ ವರ್ಗಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ, ನಗರ ಪೊಲೀಸ್ ತಂಡಗಳು ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಜಾಖರ್ಂಡ್, ಹರಿಯಾಣ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗ್ಯಾಂಗ್‍ನ ಸಹಚರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು