ಸೌತ್ ಸುಂದರಿ ಸಮಂತಾ (Actress Samantha) ಮತ್ತೆ ಸುದ್ದಿಯಲ್ಲಿದ್ದಾರೆ. ಡಿವೋರ್ಸ್ ನಂತರ ಸಮಂತಾ ಬದುಕಿನಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಯಿಂದ ಹೊರಬಂದು ಚಿತ್ರಗಳಲ್ಲಿ ಆಕ್ಟೀವ್ ಆಗಿರುವ ನಟಿ ಮತ್ತೊಂದು ಶಾಕ್ ಎದುರಾಗಿದೆ. ಆತ್ಮೀಯ ಸ್ನೇಹಿತೆ ಜೊತೆ ಬ್ರೇಕಪ್ ಆಗಿದೆ.
ವೈಯಕ್ತಿಕ ಬದುಕಲ್ಲಿ ಏರುಪೇರಾದ ಮೇಲೆ ಸಿನಿಮಾಗಳತ್ತ ಸಮಂತಾ ಮುಖ ಮಾಡಿದ್ದರು. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿರುವ ನಟಿಯ ಬಗ್ಗೆ ಹೊಸ ಸುದ್ದಿಯೊಂದು ಟಿಟೌನ್‌ನಲ್ಲಿ ಹರಿದಾಡುತ್ತಿದೆ. `ಏ ಮಾಯ ಚೇಸಾವೆ’ (Ye Maya Chesave) ಮೂಲಕ ಸಿನಿ ಪಯಣ ಆರಂಭಿಸಿದ ಸಮಂತಾಗೆ, ಅವರ ಪಾತ್ರಕ್ಕೆ ಖ್ಯಾತ ಡಬ್ಬಿಂಗ್ ತಾರೆ ಚಿನ್ಮಯಿ ಶ್ರೀಪಾದ (Chinamayi Shreepadha) ಧ್ವನಿ ನೀಡಿದ್ದರು. ಇದನ್ನೂ ಓದಿ:ತಂಡು ಬಟ್ಟೆ ಧರಿಸಿ, ನಡೆಯೋಕು ಕಷ್ಟಪಡ್ತಿದ್ದ ಉರ್ಫಿಗೆ ನೆಟ್ಟಿಗರಿಂದ ತರಾಟೆ
ಸ್ಯಾಮ್ ಮೊದಲ ಚಿತ್ರ ಹಿಟ್ ಆದ್ಮೇಲೆ ಆಕೆಯ ಪ್ರತಿ ಸಿನಿಮಾಗೆ ಚಿನ್ಮಯಿ ಡಬ್ಬಿಂಗ್ ಮಾಡುತ್ತಿದ್ದರು. ವೈಯಕ್ತಿಕವಾಗಿಯೂ ಈ ಗೆಳೆತನ ಮುಂದುವರೆದಿತ್ತು. ಆದರೆ ಈಗ ಇವರಿಬ್ಬರು ದೂರವಾಗಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಇನ್ನೂ ತಮ್ಮ ಮುಂದಿನ ಚಿತ್ರ ಯಶೋದಾಗೆ ಸಮಂತಾನೇ ಡಬ್ಬಿಂಗ್ ಮಾಡುವುದಾಗಿ ಹಠ ಮಾಡಿದ್ದರಂತೆ. ಆದರೆ ನಿರ್ಮಾಪರು ಚಿನ್ಮಯಿಗಾಗಿ ಹುಡುಕುತ್ತಿದ್ದಾರೆ.
ಸಮಂತಾ ಹಠ ಅವರ ಒತ್ತಾಯಕ್ಕೆ ಕಾರಣವೇನು ಎಂಬುದನ್ನ ಎಲ್ಲರೂ ಚರ್ಚಿಸುತ್ತಿದ್ದಾರೆ. ಸ್ಯಾಮ್ ಮತ್ತು ಚಿನ್ಮಯಿ ನಡುವೆ ಗ್ಯಾಪ್ ಇರೋದು ನಿಜ ಎನ್ನಲಾಗುತ್ತಿದೆ. ಅದಕ್ಕೆ ಸಮಂತಾ ಕೇಳದೇ ಡಬ್ಬಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.