DistrictsKarnatakaKoppalLatestMain Post

ಗುಂಪು ಘರ್ಷಣೆಗೆ ಇಬ್ಬರು ಬಲಿ – ಕೊಪ್ಪಳದ ಹುಲಿಹೈದರ್ ಗ್ರಾಮದಲ್ಲಿ ನಿಷೇಧಾಜ್ಞೆ

ಕೊಪ್ಪಳ: ಗುಂಪು ಘರ್ಷಣೆಗೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮ ಬೆಚ್ಚಿಬಿದ್ದಿದೆ.

ಕ್ಷುಲ್ಲಕ ಕಾರಣಕ್ಕೆ ನಡೆದ ಗುಂಪು ಘರ್ಷಣೆಯಲ್ಲಿ ಯಂಕಪ್ಪ(60) ಮತ್ತು ಭಾಷಾವಲಿ(22) ಮೃತಪಟ್ಟಿದ್ದು, ಧರ್ಮಣ್ಣ ಹರಿಜನ್ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಿರ್ಮಾಪಕ ನರ್ಗಿಸ್ ಬಾಬು ಇನ್ನಿಲ್ಲ

ಮುಸ್ಲಿಂ ಸಮುದಾಯದ ಹುಡುಗಿಯರನ್ನು ಎಸ್.ಟಿ ಸಮುದಾಯದವರು ಮದುವೆಯಾಗಿದ್ದಾರೆ ಎಂಬ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಮುಸ್ಲಿಂ ಸಮುದಾಯದವರೇ ಚಾಕು ಹಿಡಿದುಕೊಂಡು ಬಂದು ಹಲ್ಲೆ ಮಾಡಿದ್ದಾರೆ ಅಂತ ಮೃತ ಯಂಕಪ್ಪ ಮನೆಯವರು ಆರೋಪಿಸಿದ್ದಾರೆ. ಅಲ್ಲದೇ ಈ ಗಲಾಟೆ ಹಿಂದೆ ಮಾಜಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ್ ಕಾರಣ ಎಂಬ ಆರೋಪವು ಕೇಳಿ ಬಂದಿದೆ. 

ಸದ್ಯ ಎರಡು ಗುಂಪುಗಳ ನಡುವೆ ನಡೆದ ಗಲಾಟೆಗೆ ಇಡೀ ಗ್ರಾಮವೇ ಬೂದಿ ಮುಚ್ಚಿದ ಕೆಂಡದಂತಿದೆ. ಗ್ರಾಮದಲ್ಲಿ ಆಗಸ್ಟ್ 20ರವರೆಗೂ 144 ಸೆಕ್ಷನ್ ಜಾರಿ ಮಾಡಿದ್ದು, 70ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸಿಸಿ ಕ್ಯಾಮೆರಾ ಆಧರಿಸಿ ಈ ಸಂಬಂಧ ಕನಕಗಿರಿ ಠಾಣೆಯಲ್ಲಿ 58 ಮಂದಿ ವಿರುದ್ಧ ದೂರು ದಾಖಲಾಗಿದ್ದು, ಖಾದರಭಾಷಾ ಹಾಗೂ ಹಂಪಮ್ಮ ದೂರು ಪ್ರತಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ಮತ್ತಷ್ಟು ಎಲೆಕ್ಟ್ರಿಕ್ ಬಸ್‍ಗಳು – ಆಗಸ್ಟ್ 15ಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

Live Tv

Leave a Reply

Your email address will not be published.

Back to top button