Bengaluru CityCinemaDistrictsKarnatakaLatestMain PostSandalwood

ಸ್ಯಾಂಡಲ್‍ವುಡ್ ಹಿರಿಯ ನಿರ್ಮಾಪಕ ನರ್ಗಿಸ್ ಬಾಬು ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಿರ್ಮಾಪಕ ನರ್ಗಿಸ್ ಬಾಬು(76) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನರ್ಗಿಸ್ ಬಾಬು ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಒತ್ತಡ –ಜಮೀರ್ ಬಾಯಿ ಮುಚ್ಚಿಸಿದ ನಾಯಕರು

ನರ್ಗಿಸ್ ಬಾಬು ಅವರು, ನರ್ಗಿಸ್ ಆಂಡ್ ಎಂಟರ್‌ಪ್ರೈಸಸ್ ಮೂಲಕ 23 ಚಿತ್ರಗಳನ್ನ ನಿರ್ಮಿಸಿದ್ದರು. ಮೊದಲು ಚಿತ್ರ ಹಂಚಿಕೆ ಮಾಡುತ್ತಾ ಚಿತ್ರೋದ್ಯಮಕ್ಕೆ ಕಾಲಿಟ್ಟ ಇವರು ಕನ್ನಡದಲ್ಲಿ ಸುಂದರ ಪುರುಷ ಸಿನಿಮಾವನ್ನು ಮೊದಲ ಬಾರಿಗೆ ನಿರ್ಮಾಣ ಮಾಡಿದರು. ನಂತರ ಯಾರಿಗೆ ಬೇಡ ದುಡ್ಡು, ಧನ್ ಧನಾ ಧನ್, ಅನಂತ್ ಗೌಡ ವರ್ಸಸ್ ರೆಡ್ಡಿ ಸಿನಿಮಾಗಳನ್ನು ನಿರ್ಮಿಸಿದರು.

ಅನಂತ್ ನಾಗ್, ಶಶಿಕುಮಾರ್, ನೆನಪಿರಲಿ ಪ್ರೇಮ್ ಹೀಗೆ ಹಲವಾರು ನಟರ ಸಿನಿಮಾಗಳಿಗೆ ನರ್ಗಿಸ್ ಬಾಬು ಅವರು ಬಂಡವಾಳ ಹೂಡಿದ್ದರು. ಕಳೆದ 50 ವರ್ಷಗಳಿಂದ ವಿತರಕರಾಗಿ 600ಕ್ಕೂ ಹೆಚ್ಚು ಸಿನಿಮಾಗಳನ್ನ ವಿತರಣೆ ಮಾಡಿದ್ದಾರೆ. ಅಲ್ಲದೇ 2014ರಲ್ಲಿ ತೆರೆ ಕಂಡ ಶಿವರಾಜ್‍ಕುಮಾರ್ ಹಾಗೂ ರಮ್ಯಾ ಅಭಿನಯದ ಆರ್ಯನ್ ಚಿತ್ರವನ್ನು ನಿರ್ಮಿಸಿದ್ದರು. ಇದನ್ನೂ ಓದಿ: ಲಂಪಿ ರೋಗ: ರಾಜಸ್ಥಾನದಲ್ಲಿ 12 ಸಾವಿರಕ್ಕೂ ಹೆಚ್ಚು ಮೂಕಪ್ರಾಣಿಗಳು ಬಲಿ

ನರ್ಗಿಸ್ ಬಾಬು ಅವರಿಗೆ 6 ಮಕ್ಕಳಿದ್ದು, ಇವರಲ್ಲಿ ಕಮಾರ್ ಹಾಗೂ ವಸೀಮ್ ಎಂಬ ಇಬ್ಬರು ಮಕ್ಕಳು ಸ್ಯಾಂಡಲ್‍ವುಡ್‍ನಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 73 ವರ್ಷದ ನರ್ಗಿಸ್ ಬಾಬು ಅವರ ಅಂತ್ಯಕ್ರಿಯೆಯನ್ನು ಮುನುರೆಡ್ಡಿ ಪಾಳ್ಯದಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಇಂದು ಮಧ್ಯಾಹ್ನ ನಡೆಸಲು ನಿರ್ಧರಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button