ತುಮಕೂರು: ಎರಡು ರಾಜಕೀಯ ಪಕ್ಷದ ಗುದ್ದಾಟಕ್ಕೆ 2 ದೇವಾಲಯಗಳು (Temples) ಅನಾಥವಾಗಿದೆ.
ತುಮಕೂರು (Tumakuru) ತಾಲೂಕಿನ ಹೆಬ್ಬೂರು ಹೋಬಳಿಯ ಲಿಂಗಾಪುರ ಗ್ರಾಮದಲ್ಲಿನ ಶ್ರೀ ಪಾಂಡುರಂಗ ಸ್ವಾಮಿಯ 2 ದೇವಸ್ಥಾನಗಳು ಅನಾಥವಾಗಿದೆ. ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಕ್ಷದ ಗುದ್ದಾಟವೇ ಇದಕ್ಕೆ ಕಾರಣವಾಗಿದೆ.
Advertisement
Advertisement
ಕಳೆದ 3 ವರ್ಷಗಳಿಂದಲೂ ಲಿಂಗಾಪುರ ಗ್ರಾಮದಲ್ಲಿ ದೇವಸ್ಥಾನದ ವಿಚಾರಕ್ಕೆ ಗಲಾಟೆ, ರಾಜೀ ಸಂಧಾನ ನಡೆಯುತ್ತಲೇ ಇತ್ತು. ಈ ವಿಷಯ ಕೋರ್ಟ್‌ಲ್ಲೂ ಇದೆ. ಈ ನಡುವೆ ಸಂಕ್ರಾಂತಿ ಹಬ್ಬವಾದ ಭಾನುವಾರ ದೇವರ ಉತ್ಸವ ಹಾಗೂ ವಿಶೇಷ ಪೂಜೆ ಮಾಡಲು ಮೂಲ ಕಮಿಟಿ ಸದಸ್ಯರು ಮುಂದಾಗಿದ್ದಾರೆ. ಅದಕ್ಕೆ ನೂತನ ದೇವಸ್ಥಾನದ ಪ್ರಮುಖರು ಪ್ರತಿರೋಧ ಒಡ್ಡಿದ್ದಾರೆ. ಇದನ್ನೂ ಓದಿ: ಕೆಆರ್ ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರ, ಬಂಡಾಯ ನಾಯಕರ ನಡುವೆ ವಾಗ್ಯುದ್ಧ
Advertisement
Advertisement
ಈ ವಿಷಯ ತಾರಕ್ಕಕ್ಕೇರಿ ಇಡೀ ಊರಿನಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ. ಇಡೀ ಗ್ರಾಮದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮೂವರು ಸಬ್ ಇನ್‌ಸ್ಪೆಕ್ಟರ್, ಇಬ್ಬರು ಇನ್‌ಸ್ಪೆಕ್ಟರ್ ಹಾಗೂ ಒಬ್ಬರು ಡಿವೈಎಸ್‌ಪಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಎರಡೂ ದೇವಸ್ಥಾನಗಳನ್ನು ಮುಜರಾಯಿಗೆ ಸೇರಿಸಿ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮತ್ತೆ ಈದ್ಗಾ ವಿವಾದ ಟೆನ್ಷನ್- ಜ. 21ರೊಳಗೆ ನಿಲುವು ಪ್ರಕಟಿಸಲು ಡೆಡ್‍ಲೈನ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k