ಬೆಳಗಾವಿ: ಅದೊಂದು ಸರ್ಕಾರಿ ಕಚೇರಿಯಲ್ಲಿ ಇಬ್ಬರು ಕುರ್ಚಿಗಾಗಿ ಕಿತ್ತಾಡ್ತಿದ್ದಾರೆ. ಕಚ್ಚಾಟ ಸರಿಪಡಿಸಬೇಕಾದ ಮೇಲಾಧಿಕಾರಿಗಳು ಕಂಡು ಕಾಣದಂತೆ ಕುಳಿತ್ತಿದ್ದಾರೆ. ಕಚೇರಿಯಲ್ಲಿ ನಾನೇ ಆಫೀಸರ್ ಎಂದುಕೊಂಡು ಇಬ್ಬರು ದರ್ಬಾರ್ ಮಾಡ್ತಿದ್ದಾರೆ. ಆದ್ರೆ ಇಬ್ಬರ ಜಗಳದಿಂದ ಕಚೇರಿಗೆ ಬರೋ ಜನ ಹೈರಾಣಾಗಾಗಿದ್ದಾರೆ.
ಬೆಳಗಾವಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೈಡ್ರಾಮವೇ ನಡೆದಿದೆ. ಕಚೇರಿಯ ಅಧಿಕಾರಿಗಳಿಬ್ಬರು ಕುರ್ಚಿಗಾಗಿ ಕದನ ನಡೆಸಿದ್ದಾರೆ. ವಿಶ್ವತೀರ್ಥ ಹಾಗೂ ಸದಾಶಿವ ಡಬ್ಬುಗೋಳ ನಡುವೆ ವರ್ಗಾವಣೆ ವಿಷಯಕ್ಕೆ ಜಟಾಪಟಿ ನಡೆದಿದೆ. 3 ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದ ವಿಶ್ವತೀರ್ಥರನ್ನು ಸರ್ಕಾರ ರಾಯಭಾಗ ಪಟ್ಟಣಕ್ಕೆ ವರ್ಗಾವಣೆ ಮಾಡಿತ್ತು. ಅದೇ ಜಾಗಕ್ಕೆ ಸದಾಶಿವ ಡಬ್ಬುಗೋಳರನ್ನು ನೇಮಕ ಸಹ ಮಾಡಲಾಗಿತ್ತು. ಆದರೆ ಕುರ್ಚಿ ಬಿಡದೇ ವಿಶ್ವತೀರ್ಥ ಕೆಎಟಿ ಮೊರೆ ಹೋದ್ರು. ಕೆಎಟಿ ಕೂಡ ವಿಶ್ವತೀರ್ಥರಿಗೆ ಅಧಿಕಾರ ಮುಂದುವರಿಸುವಂತೆ ಆದೇಶ ನೀಡಿ ವಿಚಾರಣೆಯನ್ನು ಕಾಯ್ದಿರಿಸಿತು.
Advertisement
Advertisement
ಅಧಿಕಾರಿಗಳಿಬ್ಬರ ಕಾದಾಟ ರಾಜಕಾರಣಿಗಳ ಪ್ರತಿಷ್ಠೆ ಸಮರವಾಗಿ ಮಾರ್ಪಟ್ಟಿದೆ. ವಿಶ್ವತೀರ್ಥ ಬೆನ್ನಿಗೆ ಸಚಿವ ರಮೇಶ್ ಜಾರಕಿಹೊಳಿ ನಿಂತ್ರೆ, ಸದಾಶಿವ ಪರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಿಂತಿದ್ದಾರೆ. ವಿಶ್ವತೀರ್ಥ ವರ್ಗಾವಣೆ ರದ್ದುಗೊಳಿಸಿ ಅಂತ ರಮೇಶ್ ಜಾರಕಿಹೊಳಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ತಮಗೆ ಬೇಕಾದವ ಅಂತ ಸದಾಶಿವರನ್ನು ಇಲ್ಲಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಧಿಕಾರಿಗಳ ಕಾದಾಟದಿಂದ ಸಾರ್ವಜನಿಕರ ಕೆಲಸ ವಿಳಂಬವಾಗ್ತಿದ್ದು ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
Advertisement
ಕೆಎಟಿ ಈ ಪ್ರಕರಣವನ್ನು ದೀರ್ಘ ಕಾಲ ಕಾಯ್ದಿರಿಸದೇ ಶೀಘ್ರ ಇತ್ಯರ್ಥಗೊಳಿಸಿ ಬೆಳಗಾವಿ ಜನರ ಕಾರ್ಯ ಸುಗಮವಾಗುವಂತೆ ಮಾಡಬೇಕಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv