ಪೊಲೀಸ್ ಠಾಣೆ ಮುಂದೆ ಹೊಡೆದಾಡಿಕೊಂಡ ಗ್ಯಾಂಗ್‍ಗಳು – ಇಬ್ಬರ ಸ್ಥಿತಿ ಗಂಭೀರ

Public TV
1 Min Read
BGK Galate

ಬಾಗಲಕೋಟೆ: ಕಬ್ಬು ಕಡಿಯುವ ಎರಡು ಗ್ಯಾಂಗ್‍ಗಳ ಸದಸ್ಯರ ಪೊಲೀಸ್ ಠಾಣಾ ಎದುರೇ ಹೊಡೆದಾಡಿಕೊಂಡ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ.

ಈ ಘಟನೆಯಲ್ಲಿ ಮಹೇಶ್ ಬಡಿಗೇರ ಹಾಗೂ ರಾಹುಲ್ ರೋಡಕರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಯ ವಿವರ:
ಈ ಎರಡು ಗುಂಪುಗಳು ಹದಿನೈದು ದಿನಗಳ ಹಿಂದೆ ಜಗಳವಾಡಿಕೊಂಡಿದ್ದವು. ಈ ವೇಳೆ ಮಹೇಶ್ ಬಡಿಗೇರ ಕೈಗೆ ಬಲವಾದ ಹೊಡೆತ ಬಿದ್ದು, ಮೂಳೆ ಮುರಿದಿತ್ತು. ಈ ಕುರಿತು ದೂರು ನೀಡಲು ಮಹೇಶ್ ಹಾಗೂ ರಾಹುಲ್ ಇಂದು ತೇರದಾಳ ಪಟ್ಟಣದ ಪೊಲೀಸ್ ಠಾಣೆಗೆ ಬಂದಿದ್ದರು. ಇದನ್ನು ತಡೆಯಲು ಮುಂದಾದ ಗುಂಪು ಮಹೇಶ್ ಮೇಲೆ ಹಲ್ಲೆ ಮಾಡಿದೆ. ಇದನ್ನು ತಡೆಯಲು ಮುಂದಾದ ರಾಹುಲ್ ಮೇಲೆಯೂ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

BGK Galate 1

ಜಗಳವನ್ನು ನೋಡಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಕುರಿತು ಮಹೇಶ್ ಹಾಗೂ ರಾಹುಲ್ ಸಂಬಂಧಿಕರು ದೂರು ನೀಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *