ಚಿಕ್ಕಮಗಳೂರು: ಹಿಜಬ್ ಹಾಗೂ ಕೇಸರಿ ಶಾಲು ವಿವಾದ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಇದರ ಬೆನ್ನಲ್ಲೇ ನೀಲಿ ಶಾಲು ಧರಿಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ಐಡಿಎಸ್‍ಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಹಿಜಬ್ ತೆಗೆಸಬಾರದು ಎಂದು ಆಗ್ರಹಿಸಿ ನೀಲಿ ಶಾಲು ಧರಿಸಿದ ಕೆಲ ವಿದ್ಯಾರ್ಥಿಗಳು ಜೈ ಭೀಮ್ ಘೋಷಣೆ ಕೂಗಿದರು. ಈ ವೇಳೆ ನೀಲಿ ಶಾಲು ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಮುಖಾಮುಖಿಯಾಗಿದ್ದರು. ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳಿಂದ ಜೈಶ್ರೀರಾಮ್ ಘೋಷಣೆ ಮಾಡಿದರು.
Advertisement
Advertisement
ಚಿಕ್ಕಮಗಳೂರು ನಗರದಲ್ಲಿ ಹಿಜಬ್‌ಗೆ ಬೆಂಬಲ ಸೂಚಿಸಿ ಬೃಹತ್ ಪ್ರತಿಭಟನೆ ನಡೆದಿದೆ. ಶಾಲಾ ಕಾಲೇಜುಗಳಲ್ಲಿ ಹಿಜಬ್‌ಗೆ ಅವಕಾಶ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ರಾಜ್ಯಾದ್ಯಂತ ಶಾಲಾಕಾಲೇಜುಗಳಲ್ಲಿ ಹಿಜಬ್ ವಿರೋಧಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಬಳಿ ನಡೆದ ಪ್ರತಿಭಟನೆಯಲ್ಲಿ 500ಕ್ಕೂ ಅಧಿಕ ಬುರ್ಖಾ, ಹಿಜಾಬ್ ಧರಿಸಿದ ಮಹಿಳೆಯರು, ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಸಮಾನ ಮನಸ್ಕರ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ ನಡೆದಿದೆ. ಇದನ್ನೂ ಓದಿ: ಸರ್ಕಾರವೇ ಹಿಜಬ್ ಪ್ರಕರಣ ಮಾಡ್ತಿದೆ: ಎಂ.ಬಿ ಪಾಟೀಲ್
Advertisement
Advertisement
ರಾಜ್ಯದಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಹಿಜಬ್ ಹಾಗೂ ಕೇಸರಿ ಸಂಘರ್ಷಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಷ್ಟು ದಿನ ಶಾಲೆಗಳಲ್ಲಿ ಮಾತ್ರವಿದ್ದ ವಸ್ತ್ರಸಂಹಿತೆಯನ್ನು ಪದವಿಪೂರ್ವ ಕಾಲೇಜುಗಳಿಗೂ ಸರ್ಕಾರ ವಿಸ್ತರಿಸಿದೆ. ಇದನ್ನೂ ಓದಿ: ಹಿಜಬ್‍ಗೆ ಬ್ರೇಕ್ – ಏಕರೂಪ ವಸ್ತ್ರಸಂಹಿತೆ ಜಾರಿಮಾಡಿದ ಸರ್ಕಾರ
ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಧರ್ಮದ ಅನುಸಾರ ಆಚರಣೆಗಳನ್ನು ಪಾಲಿಸುತ್ತಿರುವುದು ಕಂಡುಬಂದಿದ್ದು, ಇದರಿಂದ ಸಮಾನತೆ ಮತ್ತು ಏಕತೆಗೆ ಧಕ್ಕೆ ಬರುತ್ತಿರುವುದನ್ನು ಮನಗಂಡು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಈ ಪ್ರಕರಣ ಕೋರ್ಟ್‍ನಲ್ಲಿದೆ. ನಾಳೆ ಪ್ರಕರಣದ ಕುರಿತು ಕೋರ್ಟ್ ತೀರ್ಪನ್ನು ನೀಡಲಿದೆ.