ಮೈಸೂರು: ಇಲ್ಲಿನ ಲಿಂಗದೇವರ ಕೊಪ್ಪಲು ವೃತ್ತದಲ್ಲಿ ಅಳವಡಿಸಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ನಾಮ ಫಲಕವನ್ನು ಪೊಲೀಸರು ತೆರವು ಮಾಡಿದ ಕಾರಣ ಸಿದ್ದರಾಮಯ್ಯ ಅಭಿಮಾನಿಗಳು ಪೋಲಿಸರ ವಿರುದ್ಧ ಪ್ರತಿಭಟಿಸಿ ರಸ್ತೆ ತಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.
ಹುಣಸೂರು ಮುಖ್ಯ ರಸ್ತೆಯ ಲಿಂಗದೇವರ ಕೊಪ್ಪಲು ಬಳಿ ಘಟನೆ ನಡೆದಿದೆ. ಲಿಂಗದೇವರ ಕೊಪ್ಪಲು ವೃತ್ತಕ್ಕೆ ಸಿದ್ದರಾಮಯ್ಯ ಅವರ ಹೆಸರಿಡಲು ಲಿಂಗ ದೇವರ ಕೊಪ್ಪಲು ಗ್ರಾಮಸ್ಥರು ಮುಂದಾಗಿ ನಾಮಫಲಕ (Road Name Plate) ಹಾಕಿದ್ದರು. ಆದ್ರೆ ಪೋಲಿಸರು ಏಕಾಏಕಿ ನಾಮ ಫಲಕ ತೆರವು ಮಾಡಿದ್ದರು. ಹೀಗಾಗಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಗ್ರಾಮಸ್ಥರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕ್ ವಾಯುನೆಲೆ ಮೇಲೆ ಆತ್ಮಹತ್ಯಾ ಬಾಂಬರ್‌ಗಳ ದಾಳಿ – ಮೂವರು ಉಗ್ರರ ಹತ್ಯೆ
Advertisement
Advertisement
ಸರ್ಕಲ್‌ಗೆ ಸಿದ್ದರಾಮಯ್ಯ ನಾಮಫಲಕ ಮತ್ತೆ ಅಳವಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪೊಲೀಸರು (Mysuru Police) ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಉದ್ಯೋಗಿಗಳಿಗೆ ಕಾರುಗಳನ್ನು ಗಿಫ್ಟ್ ನೀಡಿದ ಕಂಪನಿ!
Advertisement
Web Stories