ಬೆಂಗಳೂರು: ವಿಧಾನ ಪರಿಷತ್ (Vidhan Parishad) ಕಲಾಪದಲ್ಲಿ ಮಂಗಳವಾರ ಸಚಿವ ಮುರುಗೇಶ್ ನಿರಾಣಿ (Murugesh Nirani), ಜೆಡಿಎಸ್ (JDS) ಸದಸ್ಯ ಮರಿತಿಬ್ಬೇಗೌಡ (Maritibbe Gowda) ನಡುವೆ ಏಕವಚನ ಬೈಗಳ ಗಲಾಟೆ ನಡೆಯಿತು. ಒಬ್ಬರಿಗೊಬ್ಬರು ಬಾಯಿಗೆ ಬಂದಂತೆ ಬೈದುಕೊಂಡು ಗಲಾಟೆ ಮಾಡಿದರು.
ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ವೇಳೆ ಮರಿತಿಬ್ಬೇಗೌಡ ಪ್ರಶ್ನೆ ಕೇಳಿದರು. ಈ ವೇಳೆ ಭೂಸ್ವಾಧೀನ ಪರಿಹಾರ ಅಕ್ರಮ ವಿಚಾರದ ಕುರಿತು ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ಎಂದು ಮರಿತಿಬ್ಬೇಗೌಡ ಮಾತನಾಡಿದರು. ಈ ಹೇಳಿಕೆಗೆ ಸಚಿವ ನಿರಾಣಿ ತಿರುಗೇಟು ನೀಡುತ್ತಾ, ಸರಿಯಾಗಿ ಮಾತನಾಡು.. ಅರಚಾಡಬೇಡ. ನಾನು ಉತ್ತರ ಕರ್ನಾಟಕದವನು ನಿನ್ನ ಹತ್ತರಷ್ಟು ಜೋರು ಮಾತನಾಡಲು ಬರಲಿದೆ ಎಂದು ಕೈ ತೋರಿಸಿ ವಾಗ್ದಾಳಿ ನಡೆಸಿದರು. ಈ ವೇಳೆ ಸದನದಲ್ಲಿ ಗದ್ದಲ ನಡೆಯಿತು. ಇದನ್ನೂ ಓದಿ: ಮುಸ್ಲಿಂ ಮತಗಳ ಓಲೈಕೆಗೆ ಮುಂದಾದ ಹೈಕಮಾಂಡ್ – ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಸವಾಲು
Advertisement
Advertisement
ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಬಿಎಂಆರ್‌ಸಿಎಲ್‌ಗೆ ಹಂಚಿಕೆ ಮಾಡಿ 22 ಕೋಟಿ ಪರಿಹಾರ ಕೊಡಲಾಗಿದೆ. 12 ಗುಂಟೆ ಬಿಡಿಎ ಆಸ್ತಿಗೆ ಖಾಸಗಿ ವ್ಯಕ್ತಿಗೆ 22 ಕೋಟಿ ಪರಿಹಾರ ನೀಡಲಾಗಿದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆರೋಪಿಸಿದರು.
Advertisement
ಇದಕ್ಕೆ ಉತ್ತರಿಸಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬೆಂಗಳೂರು ಉತ್ತರ ತಾಲ್ಲೂಕಿನ ನಾಗವಾರ ಹೋಬಳಿಯಲ್ಲಿ 32 ಗುಂಟೆ ಸ್ವಾಧೀನ ಕಟ್ಟಡಗಳಿದ್ದ ಕಾರಣ 12 ಗುಂಟೆಯನ್ನು ಸ್ವಾಧೀನದಿಂದ ಕೈಬಿಡಲಾಗಿತ್ತು. 15 ವರ್ಷವಾದರೂ ಭೂಮಿ ಕಳೆದುಕೊಂಡ ವ್ಯಕ್ತಿಗೆ ಪರಿಹಾರ ಸಿಕ್ಕಿಲ್ಲ. ಸ್ವಾಧೀನಪಡಿಸಿಕೊಂಡ ಜಮೀನು ಸ್ವಾಧೀನವಾಗದೇ ಇದ್ದಲ್ಲಿ ಸ್ವಾಧೀನ ಪ್ರಕ್ರಿಯೆ ರದ್ದಾಗಲಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡೇ ಪರಿಹಾರ ನೀಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.
Advertisement
ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ನಿಮಗೆ ಎಂದರು. ಈ ಮಾತಿಗೆ ತಿರುಗೇಟು ನೀಡಿದ ಸಚಿವ ನಿರಾಣಿ, ಸರಿಯಾಗಿ ಮಾತನಾಡು.. ಅರಚಾಡಬೇಡ. ನಾನು ಉತ್ತರ ಕರ್ನಾಟಕದವನು. ನಿನ್ನ ಹತ್ತರಷ್ಟು ಜೋರು ಮಾತನಾಡಲು ಬರಲಿದೆ ಎಂದು ಕೈ ತೋರಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಭಿವೃದ್ಧಿ ಮಾಡಿದ್ದು ಯಾರು? – ವೇದಿಕೆಯಲ್ಲೇ ಅಶ್ವಥ್ ನಾರಾಯಣ್ Vs ಅನಿತಾ ಕುಮಾರಸ್ವಾಮಿ ವಾಗ್ವಾದ
ಅಲ್ಲಿಗೆ ಚರ್ಚೆ ಸ್ಥಗಿತಗೊಳಿಸಿ ಸಭಾಪತಿಗಳು ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು. ಉತ್ತರ ಖಂಡಿಸಿ ಮರಿತಿಬ್ಬೇಗೌಡ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಧ್ಯಪ್ರವೇಶ ಮಾಡಿ, ಸಚಿವರು ಉತ್ತರ ಕೊಡುತ್ತಿದ್ದಾರೆ ಮಾತನಾಡಲು ಬಿಡಿ ಎಂದರು. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಾನು ಅನುಮತಿ ನೀಡಲ್ಲ. ಬಾಯಿ ಇದೆ ಎಂದು ಮನಸ್ಸಿಗೆ ಬಂದಂತೆ ಮಾತನಾಡಲು ಸಾಧ್ಯವಿಲ್ಲ. ಸದನ ನಡೆಸಬೇಕೋ ಬೇಡವೋ? ಬೇರೆ ಸದಸ್ಯರಿಲ್ಲವೆ? ನೀವೇಳಿದಂತೆ ಸದನ ನಡೆಸಲು ಸಾಧ್ಯವಿಲ್ಲ ಎಂದರು.
ಈ ವೇಳೆ ಸರ್ಕಾರದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಅವಕಾಶ ಕೊಡಬೇಡಿ ಎಂದರು. ಇದಕ್ಕೆ ಕಿಡಿಕಾರಿದ ಹರಿಪ್ರಸಾದ್, ನೀವು ಅಧ್ಯಕ್ಷರಾ? ಬೇಡ ಎನ್ನಲು ನೀವು ಯಾರು ಎಂದು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸರ್ಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ನಿರ್ಧಾರ ಪ್ರಕಟಿಸಿದ್ದೇನೆ ಎಂದು ಸಭಾಪತಿಗಳು ಸ್ಪಷ್ಟಪಡಿಸಿದರು. ನನ್ನ ನಿರ್ಧಾರದಲ್ಲಿ ಬದಲಿಲ್ಲ. ಬೇರೆ ರೂಪದಲ್ಲಿ ಕೊಡಿ ಪರಿಗಣಿಸಲಾಗುತ್ತದೆ. ನಾಳೆ ನಾಡಿದ್ದರಲ್ಲಿ ಪರಿಗಣನೆ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಕಾಂಗ್ರೆಸ್ ಸದಸ್ಯರು ಧರಣಿ ಕೈಬಿಟ್ಟರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k