ಮಂಡ್ಯ: ಕನ್ನಡ ರಾಜ್ಯೋತ್ಸವ (Kannada Rajyotsava) ಸಮಾರಂಭದ ವೇದಿಕೆ ಕಾರ್ಯಕ್ರಮದಲ್ಲಿ ಅಲಿಬಾಬಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ಹಾಗೂ ಬಿಜೆಪಿಯ (BJP) ಸಚಿವ ನಾರಾಯಣಗೌಡ (K.C.Narayana Gowda) ನಡುವೆ ವೇದಿಕೆಯಲ್ಲೇ ಗಲಾಟೆ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ (T.A.Narayana Gowda) ಇಬ್ಬರಿಗೂ ಕ್ಲಾಸ್ ತೆಗೆದುಕೊಂಡ ಘಟನೆ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದಿದೆ.
ಮಂಡ್ಯ (Mandya) ಜಿಲ್ಲೆಯ ಕೆ.ಆರ್. ಪೇಟೆ (K.R. Pet) ಕ್ಷೇತ್ರದಲ್ಲಿ ಇದೀಗ ಚುನಾವಣೆಗೂ ಮುನ್ನವೇ ಕೆಸರೆರಚಾಟ ಶುರುವಾಗಿದೆ. ಕರವೇಯಿಂದ ಆಯೋಜನೆ ಮಾಡಿದ್ದ ಕನ್ನಡದ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಜೆಡಿಎಸ್ (JDS) ಮುಖಂಡ ಸಂತೋಷ್ ಹಾಗೂ ಸಚಿವ ನಾರಾಯಣಗೌಡ ನಡುವೆ ಕೆಸರೆರಚಾಟ ನಡೆಯಿತು. ಇದಕ್ಕೆ ಮಧ್ಯ ಪ್ರವೇಶ ಮಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ದಸರಾ ಆನೆ ಬಲರಾಮನಿಗೆ ಗುಂಡೇಟು – ಫೈರಿಂಗ್ ಮಾಡಿದ್ದ ವ್ಯಕ್ತಿ ಬಂಧನ
Advertisement
Advertisement
ಕೆ.ಆರ್. ಪೇಟೆ ಉಪಚುನಾವಣೆಯಲ್ಲಿ ಸಚಿವ ನಾರಾಯಣಗೌಡ ಬಿಜೆಪಿಯಿಂದ ಗೆಲುವು ಸಾಧಿಸಿದಾಗಿನಿಂದ ಜೆಡಿಎಸ್ ಮುಖಂಡರು ನಾರಾಯಣಗೌಡ ಅವರನ್ನು ಟಾರ್ಗೆಟ್ ಮಾಡುತ್ತಾ ವಾಗ್ದಾಳಿ ಮಾಡುತ್ತಲ್ಲೇ ಇದ್ದಾರೆ. ಹಾಗೆಯೇ ಕರವೇಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಸಂತೋಷ್ ಮಾತಾನಾಡುವ ವೇಳೆ, “ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಾಗೇಯೇ ಕೆ.ಆರ್. ಪೇಟೆಯಲ್ಲಿ ಭ್ರಷ್ಟಾಚಾರ ಇದೆ. ಎಲ್ಲರಿಗೂ ಅಲಿಬಾಬ ಮತ್ತು 40 ಕಳ್ಳರ ಕಥೆ ಗೊತ್ತು ಅಲ್ವಾ. ಹಾಗೆಯೇ ಕೆ.ಆರ್. ಪೇಟೆಯಲ್ಲಿ ಒಬ್ಬ ಅಲಿಬಾಬ ಇದ್ದಾನೆ. ಆತ ನಾಲ್ಕು ಕಳ್ಳರನ್ನು ಸಾಕಿಕೊಂಡಿದ್ದಾನೆ ” ಎಂದು ಪರೋಕ್ಷವಾಗಿ ಸಚಿವ ನಾರಾಯಣಗೌಡಗೆ ಹೇಳಿದ್ದಾರೆ. ಸಚಿವ ನಾರಾಯಣಗೌಡ ಈ ಮಾತನ್ನು ಕೇಳಿ, “ಯಾರಿಗೆ ಹೇಳ್ತಾ ಇದೀಯಾ ನೀನು. ನಾನು ಯಾವ ಭ್ರಷ್ಟಾಚಾರ ಮಾಡಿದ್ದೀನಿ. ಏನು ಮಾತಾನಾಡುತ್ತಾ ಇದೀಯಾ” ಎಂದು ಜೆಡಿಎಸ್ ಮುಖಂಡ ಸಂತೋಷ್‌ಗೆ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು.
Advertisement
Advertisement
ಈ ಹೈಡ್ರಾಮವನ್ನು ನೋಡುವವರೆಗೆ ನೋಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ನಿರೂಪಕನ ಕೈಯಿಂದ ಮೈಕ್ ಕಿತ್ತುಕೊಂಡು ರಾಜಕೀಯ ಮುಖಂಡರಿಗೆ ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡರು. “ರಾಜಕೀಯ ಪಕ್ಷದವರನ್ನು ಈ ಕಾರ್ಯಕ್ರಮಕ್ಕೆ ಯಾಕೆ ಕರೆದುಕೊಂಡು ಬಂದ್ರಿ. ನಾಡು-ನುಡಿಗಾಗಿ ರಾಜಕಾರಣಿಗಳು ಏನೂ ಮಾಡಿಲ್ಲ. ನಾಡು-ನುಡಿಗೆ ರಾಜಕಾರಣಿಗಳು ಜೈಲಿಗೆ ಹೋಗಿಲ್ಲ. ಎಲ್ಲಾ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಾರೆ. ಎಲ್ಲಾ ಭಾಷಿಕರನ್ನು ಓಲೈಸಿಕೊಂಡು ಕನ್ನಡಿಗರನ್ನು ಮರೆಯುತ್ತಾರೆ. ಬೆಳಗಾವಿಯಲ್ಲಿ 14 ಶಾಸಕರು ಇದ್ದಾರೆ. ಒಬ್ಬ ಶಾಸಕ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಕೇಳುತ್ತಿಲ್ಲ. ಇಂತಹ ರಾಜಕೀಯ ಮುಖಂಡರನ್ನು ಈ ಕಾರ್ಯಕ್ರಮಕ್ಕೆ ಕರೆದಿದ್ದೀರಾ ಎಂದು ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್