ಬೆಂಗಳೂರು: ಕೊರೊನಾನಿಂದ ಜನರ ಜೀವವನ್ನು ಕಾಪಾಡಲು ವೈದ್ಯರು, ನರ್ಸ್ ಮತ್ತು ಪೊಲೀಸರು ಮಾತ್ರ ಹೋರಾಡುತ್ತಿಲ್ಲ. ಇವರ ಜೊತೆಗೆ ಪೌರ ಕಾರ್ಮಿಕರು ಕೂಡ ಹೋರಾಡುತ್ತಿದ್ದಾರೆ. ಹೀಗಾಗಿ ರಿಯಲ್ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಗಿದೆ. ಇದನ್ನೂ ಓದಿ: ಗದಗನ ಪೌರಕಾರ್ಮಿಕರಿಗೆ ಮುತ್ತಿನ ಹಾರದ ಸನ್ಮಾನ
ಬೆಂಗಳೂರಿನ ಶ್ರೀರಾಂಪುರದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಗಿದೆ. ಪೌರ ಕಾರ್ಮಿಕರು ಪ್ರತಿ ಮನೆ, ರಸ್ತೆಗೂ ಹೋಗಿ ಕಸವನ್ನು ತೆಗೆದುಕೊಂಡು ಸ್ವಚ್ಛತೆ ಮಾಡುತ್ತಾರೆ. ಯಾರ ಮನೆಯವರಿಗೆ ಕೊರೊನಾ ಇರುತ್ತದೆಯೋ ಗೊತ್ತಿಲ್ಲ. ಆದರೂ ಇವರು ಪ್ರತಿ ರಸ್ತೆಯ ಸ್ವಚ್ಛತೆಯ ಕಾರ್ಯಯನ್ನು ಮಾಡುತ್ತಾರೆ. ಹೀಗಾಗಿ ಶ್ರೀರಾಂಪುರದಲ್ಲಿ ರಿಯಲ್ ಕೊರೊನಾ ವಾರಿಯರ್ಸ್‌ಗೆ ಹಣದ ಹಾರ ಹಾಕಿ ಸನ್ಮಾನ ಮಾಡಲಾಗಿದೆ.
Advertisement
Advertisement
ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಹಣದ ಹಾರ, ಶಾಲು ಹೊದಿಸಿ ಸ್ಥಳೀಯರು ಸನ್ಮಾನ ಮಾಡಿದ್ದಾರೆ. ಈ ವೇಳೆ ಅಲ್ಲಿನ ಜನರು ಮನೆಯೊಳಗೆ ನಿಂತುಕೊಂಡು ಕಾರ್ಮಿಕರಿಗಾಗಿ ಚಪ್ಪಾಳೆ ತಟ್ಟಿದ್ದಾರೆ. ಸ್ಥಳದಲ್ಲಿದ್ದವರು ಇದನ್ನು ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.