ಬೆಂಗಳೂರು: ಸಿಐಟಿಯು ಬೆಂಗಳೂರು ಹಾಗೂ ಉತ್ತರ-ದಕ್ಷಿಣ-ರಾಮನಗರ ಜಿಲ್ಲಾ ಸಮಿತಿಗಳಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಹೋರಾತ್ರಿ ಕಾರ್ಯಕ್ರಮ ನಡೆಯಿತು. ನಗರದ ಟೌನ್ ಹಾಲ್‌ನ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಭೂಮಿ ತಾಯಿ ಬಳಗದಿಂದ ದೇಶಪ್ರೇಮಿ ಹಾಡುಗಳನ್ನು ಹಾಡಲಾಯಿತು.
ಹಿರಿಯ ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾರ್ಮಿಕ ಮುಖಂಡ ಹೆಚ್.ಎನ್ ಗೋಪಾಲಗೌಡ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು.
Advertisement
Advertisement
ಪ್ರಗತಿಪರ ಚಿಂತಕ, ಗಾಂಧಿವಾದಿ ವಿ.ಪಿ ಮೇನನ್, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಿಐಟಿಯು ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡ ಕೆ.ಎನ್ ಉಮೇಶ್, ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ. ಪ್ರಕಾಶ್ ಕೆ, ಡಿಹೆಚ್‌ಎಸ್‌ನ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಹಳ್ಳಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಅವರು ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಯೋಧರಿಂದ್ಲೇ ಧ್ವಜಾರೋಹಣ ಮಾಡಿಸಿ ಸಂಭ್ರಮಿಸಿದ ಇಡೀ ಗ್ರಾಮ
Advertisement
Advertisement
ಕಾರ್ಯಕ್ರಮದ ಸ್ವಾಗತವನ್ನು ಸಿಐಟಿಯು ಬೆಂ.ದಕ್ಷಿಣ ಜಿಲ್ಲಾ ಅಧ್ಯಕ್ಷ ಬಿ.ಎನ್ ಮಂಜುನಾಥ್, ನಿರೂಪಣೆಯನ್ನು ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ, ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಉತ್ತರ ಜಿಲ್ಲಾ ಕಾರ್ಯದರ್ಶಿ ಪಿ. ಮುನಿರಾಜು ಹಾಗೂ ವಂದನಾರ್ಪಣೆಯನ್ನು ರಾಮನಗರ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಅವರು ಮಾಡಿದರು.
ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯ ಮುಖಂಡರಾದ ಕೆ. ಮಹಂತೇಶ್, ಟಿ. ಲೀಲಾವತಿ, ಮಾಲಿನಿ ಮೇಸ್ತಾ, ವಿವಿಧ ಸಂಘಟನೆಗಳ ರಾಜ್ಯ ಮುಖಂಡರಾದ ಜಿ.ಎನ್ ನಾಗರಾಜ್, ನಿತ್ಯಾನಂದಸ್ವಾಮಿ, ಚಂದ್ರಪ್ಪ ಹೋಸ್ಕೆರಾ, ಗೌರಮ್ಮ, ಕೆ.ಎಸ್ ವಿಮಲ, ಟಿ. ಸುರೇಂದ್ರ ರಾವ್ ಹಾಗೂ ಸಿಐಟಿಯು ಜಿಲ್ಲಾ, ವಿವಿಧ ಸಂಘಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಇದನ್ನೂ ಓದಿ: ರಾಷ್ಟ್ರದ ಉನ್ನತಿಯಲ್ಲಿ ಪ್ರಧಾನಿ ಮೋದಿಯವರ ಕೊಡುಗೆ ಅನನ್ಯ: ಬಾಲಚಂದ್ರ ಜಾರಕಿಹೊಳಿ
Live Tv
[brid partner=56869869 player=32851 video=960834 autoplay=true]