BelgaumDistrictsKarnatakaLatestMain Post

ಯೋಧರಿಂದ್ಲೇ ಧ್ವಜಾರೋಹಣ ಮಾಡಿಸಿ ಸಂಭ್ರಮಿಸಿದ ಇಡೀ ಗ್ರಾಮ

ಚಿಕ್ಕೋಡಿ(ಬೆಳಗಾವಿ): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನ ದೇಶದೆಲ್ಲೆಡೆ ಸಂಭ್ರಮದಿಂದ ಧ್ವಜಾರೋಹಣ ಮಾಡಿ ಸಿಹಿ ಹಂಚಿ ಆಚರಿಸಲಾಗುತ್ತಿದೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ ಗ್ರಾಮಸ್ಥರೆಲ್ಲ ಸೇರಿ ವಿಶೇಷವಾಗಿ ಸ್ವತಂತ್ರ ದಿನದ ಅಮೃತ ಮಹೋತ್ಸವವನ್ನು ಆಚರಣೆ ಮಾಡಿದ್ದಾರೆ.

ಚಿಕಾಲಗುಡ್ಡ ಗ್ರಾಮ ಸೇರಿದಂತೆ ಸಮೀಪದ ಯೋಧರನ್ನೆಲ್ಲ ಒಗ್ಗೂಡಿಸಿ ಯೋಧರಿಂದಲೇ ಧ್ವಜಾರೋಹಣ ಮಾಡಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಭಾರತೀಯ ವಾಯುಸೇನೆ, ನೌಕಾದಳ ಹಾಗೂ ಭೂ ಸೇನೆಯ ಹಾಲಿ ಹಾಗೂ ಮಾಜಿ ಯೋಧರಿಂದ ಧ್ವಜಾರೋಹಣ ನೆರವೇರಿಸಿ ಧ್ವಜಾರೋಹಣದ ಜೊತೆಗೆ ಯೋಧರಿಗೆ ಸನ್ಮಾನವನ್ನ ಗ್ರಾಮಸ್ಥರು ಮಾಡಿದ್ದಾರೆ.

ದೇಶ ಸ್ವತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವದರಲ್ಲಿ ಯೋಧರ ಕೊಡುಗೆ ಅಪಾರವಿದೆ. ಗಡಿಯಲ್ಲಿ ತಮ್ಮ ಪ್ರಾಣಗಳನ್ನ ಒತ್ತೆಯಿಟ್ಟು ಯೋಧರು ದೇಶ ಕಾಯುತ್ತಿರುವ ಪರಿಣಾಮ ನಾವೆಲ್ಲ ಸುರಕ್ಷಿತವಾಗಿದ್ದಿವೆ. ನಾವೆಲ್ಲ ಸುರಕ್ಷಿತವಾಗಿರಲು ಯೋಧರ ಸೇವೆಯೇ ಕಾರಣ ಎಂದು ಗ್ರಾಮಸ್ಥರು ಯೋಧರಿಗೆ ಅಭಿನಂದನೆ ಸಲ್ಲಿಸುವದರ ಜೊತೆಗೆ ಸನ್ಮಾನ ನೆರವೇರಿಸಿದ್ದಾರೆ.

ಯೋಧರಿಂದ ನಡೆದ ಸ್ವತಂತ್ರೋತ್ಸವದ ಕಾರ್ಯಕ್ರಮದಲ್ಲಿ ಪ್ರವೀಣ್ ಅನೋಜಿ, ಮಹಾಂತೇಶ್ ಪಟಾದ್, ವಿವೇಕ್ ಜಿರಳಿ,ಭರಮಾ ಬಡಗಾಂವಿ, ಮಹೇಶ್ ಪಾಟೀಲ್, ದರೆಪ್ಪ ಜಿರಳಿ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಕಲಬುರಗಿ ವಿಮಾನ ನಿಲ್ದಾಣ ಬಳಿ 1,000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

Live Tv

Leave a Reply

Your email address will not be published.

Back to top button