ಬೆಂಗಳೂರು: ಬೆಂಗಳೂರಿನ (Bengaluru) ಸರ್ಜಾಪುರ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ (Bike) ಮೇಲೆ ಸಿನಿಮಾ ಸ್ಟೈಲ್‍ನಲ್ಲಿ ಪ್ರೇಯಸಿ ಜೊತೆ ರೊಮ್ಯಾನ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ಪುಂಡ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ಳಂದೂರು ನಿವಾಸಿ ಅಚ್ಚುತ್ ಕುಮಾರ್ ಎಂದು ಗುರುತಿಸಲಾಗಿದೆ. ಯುವಕ ಬುಲೆಟ್ ಬೈಕ್‍ನ (Bike) ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಉಲ್ಟಾ ಕೂರಿಸಿಕೊಂಡು ಹಾಡಹಗಲೇ ಹಗ್ಗಿಂಗ್, ಕಿಸ್ಸಿಂಗ್ ಮಾಡುತ್ತಾ ನಡುರಸ್ತೆಯಲ್ಲಿ ಬೈಕ್ ಚಲಾಯಿಸಿದ್ದ.
Advertisement
Advertisement
ತಮಿಳುನಾಡಿನ ನಂಬರ್ ಪ್ಲೇಟ್ ಹೊಂದಿರುವ ಬೈಕ್ ಇದಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಕರ್ನಾಟಕ ಪ್ರೋಟೋಫೊಲಿಯೋ ಎಂಬ ಪೇಜ್‍ನಿಂದ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗಿತ್ತು.
Advertisement
Advertisement
ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.