ಬೆಂಗಳೂರು: ಭಾರತದ ಹೆಮ್ಮೆಯ ಆಟಗಾರ್ತಿ ಹಿಮಾದಾಸ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಲು ಸಾಲು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಸಾಧನೆಗೆ ಇಡೀ ದೇಶವೇ ಸಂತೋಷ ಪಡುತ್ತಿದ್ದು, ಸಿನಿಮಾ ತಾರೆಯರು ಕೂಡ ಶುಭಾಶಯ ಕೋರುತ್ತಿದ್ದಾರೆ.
ಹಿಮಾದಾಸ್ ಅವರು 19 ದಿನದಲ್ಲಿ ಬರೋಬ್ಬರಿ 5 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟ್ಸ್ ನಲ್ಲಿ ಹಿಮಾದಾಸ್ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ 5ನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಸಾಲು ಸಾಲು ಚಿನ್ನ ಗೆಲ್ಲುತ್ತಿರುವ ಹಿಮಾ ದಾಸ್‍ಗೆ ಭಾರತೀಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
Advertisement
Finished 400m today on the top here in Czech Republic today ????♀️ pic.twitter.com/1gwnXw5hN4
— Hima (mon jai) (@HimaDas8) July 20, 2019
Advertisement
ಅಷ್ಟೇ ಅಲ್ಲದೇ ಸ್ಯಾಂಡಲ್‍ವುಡ್, ಬಾಲಿವುಡ್ ಸಿನಿ ತಾರೆಯರು ಹಿಮಾದಾಸ್‍ಗೆ ಟ್ವೀಟ್ ಮಾಡುವ ಮೂಲಕ ಅವರ ಸಾಧನೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಅವರು “ಅದ್ಭುತ, ಅದ್ಭುತ, ಅದ್ಭುತ” ಎಂದು ಕೈ ಮುಗಿಯುತ್ತಿರುವ ಎಮೋಜಿ ಹಾಕಿ ವಿಶ್ ಮಾಡಿದ್ದಾರೆ.
Advertisement
ಬಾಲಿವುಡ್‍ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು “ಭಾರತೀಯ ಹೆಮ್ಮೆಯ ಹಿಮಾ ದಾಸ್ ಅವರು ಚಂದ್ರನಿಗಿಂತ ಮೀರಿ ಅವರ ಓಟ ಸಾಗಿದೆ. ಈಗ ಹಿಮಾದಾಸ್ ಐದನೇ ಚಿನ್ನ ಗೆದ್ದಿದ್ದಾರೆ. ಹೀಗಾಗಿ ನಾವು ಇನ್ನೊಂದು ಚಂದ್ರನನ್ನು ಸೃಷ್ಟಿಸಬೇಕಾಗಿದೆ. ಅಮೇಜಿಂಗ್” ಎಂದು ಅಮಿತಾಭ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಓಡುತ್ತಿರುವ ಹಿಮಾದಾಸ್ ಹಿಂದೆ ಚಂದ್ರನಿಗೆ ಚಿನ್ನದ ಪದಕದ ಬ್ಯಾಗ್ರೌಂಡ್ ಮಾಡಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಹಿಮಾದಾಸ್ ಅವರ ಸಾಧನೆಯನ್ನು ಚಂದ್ರನಿಗೆ ಹೋಲಿಸಿದ್ದಾರೆ.
Advertisement
???????????????????????????????????????????????????????????????????????????????????????????????????????????????????????????????????????????????? Awesome awesome awesome…. https://t.co/ewksjZjaiF
— Kichcha Sudeepa (@KicchaSudeep) July 21, 2019
ಬಾಲಿವುಡ್ ನಟಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, “19 ದಿನಗಳು-5 ಚಿನ್ನದ ಪದಕ-1 ಚಿನ್ನದ ಹುಡುಗಿ, ಅಭಿನಂದನೆಗಳು ಹಿಮಾ ದಾಸ್. ಯುವತಿಯರಿಗೆ ದೊಡ್ಡ ಸ್ಫೂರ್ತಿ ನೀವು” ಎಂದು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ಬಾಲಿವುಡ್ ನಟ ಅನಿಲ್ ಕಪೂರ್ ಸೇರಿದಂತೆ ಅನೇಕರು ಹಿಮಾದಾಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟ-ನಟಿಯರಷ್ಟೆ ಅಲ್ಲದೇ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಸಚಿನ್ ತೆಂಡೂಲ್ಕರ್ ಸೇರಿದಂತೆ ರಾಜಕಾರಣಿಗಳು ಹಿಮಾ ದಾಸ್ ಅವರಿಗೆ ವಿಶ್ ಮಾಡಿದ್ದಾರೆ.
T 3233 – Hima Das .. the pride of India .. to the Moon and beyond .. indeed but we need to add another Moon for she has done 5 now .. AMAZING !!???????????????????????????????????????????????????????????????????????? pic.twitter.com/bE18xU0PSx
— Amitabh Bachchan (@SrBachchan) July 21, 2019
ಐದು ಚಿನ್ನದ ಪದಕ:
ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನದ ಪದಕ ಗೆದ್ದಿದ್ದರು. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.
ಅದೇ ರೀತಿ ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.
19 days – 5 gold medals – 1 golden girl ! Congratulations @HimaDas8 ! You are an exemplary example of solid grit & determination & a huge inspiration to young girls ????????❤
— Anushka Sharma (@AnushkaSharma) July 22, 2019
ಜುಲೈ 18ರಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡಿನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಜುಲೈ 20ರಂದು 400 ಮೀಟರ್ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಿಸಿದ್ದಾರೆ.
Loving the way you have been running in the European circuit over the last 19 days.
Your hunger to win and perseverance is an inspiration for the youth.
Congrats on your 5 ???? Medals!
All the best for the future races, @HimaDas8. pic.twitter.com/kaVdsB1AjZ
— Sachin Tendulkar (@sachin_rt) July 21, 2019