ಅಯೋಗ್ಯ ಸಿನಿಮಾ (Cinema) ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಮಹೇಶ್‍ಕುಮಾರ್ (Director Mahesh Kumar) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೈಸೂರು (Mysuru) ಮೂಲದ ಚೈತ್ರ ಎಂಬ ಹುಡುಗಿಯ ಕೈಹಿಡಿದಿದ್ದಾರೆ ನಿರ್ದೇಶಕ ಮಹೇಶ್‍ಕುಮಾರ್. ಮಾ.20 ರಂದು ಮೈಸೂರಿನಲ್ಲೇ ಕುಟುಂಬಸ್ಥರು, ಗುರು ಹಿರಿಯರು, ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಇದನ್ನೂ ಓದಿ: ಪಿ.ಸಿ ಶೇಖರ್ ನಿರ್ದೇಶನ ಮಹಾನ್ ಚಿತ್ರದಲ್ಲಿ ಮಿತ್ರ ವಿಶೇಷ ಪಾತ್ರ
ಅಯೋಗ್ಯ ಹಾಗೂ ಮದಗಜ ಸಿನಿಮಾಗಳ ನಿರ್ದೇಶನ ಮಾಡಿ ಖ್ಯಾತಿ ಪಡೆದಿರುವ ನಿರ್ದೇಶಕ ಮಹೇಶ್‍ಕುಮಾರ್. ತಮ್ಮ ಮೊದಲ ಸಿನಿಮಾದಿಂದಲೇ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದರು. ಮಹೇಶ್‍ಕುಮಾರ್ ಮದುವೆಯ ಫೋಟೋ ನೋಡಿ ಆಪ್ತರು, ಕನ್ನಡ ಚಿತ್ರರಂಗದ ಗೆಳೆಯರು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಮೋಹನ್‌ಲಾಲ್ ಮಗಳು ವಿಸ್ಮಯ ಚಿತ್ರರಂಗಕ್ಕೆ ಎಂಟ್ರಿ!