ಬೆಂಗಳೂರು: ಮೂಡುಬಿದಿರೆ (Moodbidri) ಇನ್ಸ್‌ಪೆಕ್ಟರ್‌ನಿಂದ (Inspector Sandesh) ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣವನ್ನ ಸಿಐಡಿ ತನಿಖೆಗೆ ವಹಿಸಲು ಸರ್ಕಾರಕ್ಕೆ ಆದೇಶಿಸಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ಸರ್ಕಾರಿ ನಿವಾಸದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಜೊತೆ ನಾಲ್ವರು ಸಂತ್ರಸ್ತೆಯರು ಪರಮೇಶ್ವರ್ ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಪರಮೇಶ್ವರ್, ಸಂತ್ರಸ್ತೆಯರು ಭೇಟಿ ವೇಳೆ ಹಲವು ಮಾಹಿತಿ ನೀಡಿದ್ದಾರೆ. ಈಗಾಗಲೇ ಇನ್ಸ್‌ಪೆಕ್ಟರ್ ಸಸ್ಪೆಂಡ್ ಆಗಿದ್ದಾರೆ. ಸಿಐಡಿ ತನಿಖೆ ನಡೆಸಲು ನಾನು ತೀರ್ಮಾನಿಸಿದ್ದೇನೆ ಎಂದರು. ಇದನ್ನೂ ಓದಿ: ಕುಟುಂಬ ರಾಜಕಾರಣ ಬೆಂಬಲಿಸಲ್ಲ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ – ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ಬಳಿಕ ಸಿಎಂ ಮಾತು
ಸಸ್ಪೆಂಡ್ ಮಾಡಿರೋದೇ ತಕ್ಷಣದ ಕ್ರಮ. ವರದಿ ಕೊಡಲು ಹೇಳಿದ್ದೆ, ಕೊಡುತ್ತಾರೆ. ಆದರೆ ಇವತ್ತು ಇನ್ನಷ್ಟು ಮಾಹಿತಿ ಕೊಟ್ಟಾಗ ಹೆಚ್ಚಿನ ತನಿಖೆ ಅಗತ್ಯ ಅನಿಸಿದೆ. ಸಿಐಡಿ ತನಿಖೆ ಮಾಡಿ ಕ್ರಮ ಆಗುತ್ತೆ. ಇನ್ನಷ್ಟು ಸಂತ್ರಸ್ತೆಯರು ಇರುವ ಬಗ್ಗೆ ತನಿಖೆಯಿಂದ ಗೊತ್ತಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆ – ಏ.1ರಿಂದ ಪ್ರಯಾಣ ದುಬಾರಿ

