ತಿರುವನಂತಪುರಂ: ಕೇರಳದಲ್ಲಿ(Kerala) ಮೊದಲ ಬಾರಿಗೆ ಕ್ಯಾಥೋಲಿಕ್ ಚರ್ಚ್‍ನಲ್ಲಿ(Catholic Church) ಪುರಾತನ ಸಂಸ್ಕೃತಿಯಾದ ಪೆಟ್ಟಿಗೆಯಲ್ಲಿ(Coffin) ಹೂಳುವ ಸಂಪ್ರದಾಯವನ್ನು ಕೈಬಿಟ್ಟು ಹೊಸ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ.
ಕ್ರಿಶ್ಚನ್ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಸತ್ತ ವ್ಯಕ್ತಿಯನ್ನು ಪೆಟ್ಟಿಗೆಯಲ್ಲಿ ಹೂಳು ಸಮಾಧಿ ಮಾಡುತ್ತಾರೆ ಆದರೆ ಆಲಪ್ಪುಳ ಜಿಲ್ಲೆಯ ಅಥುರ್ಂಕಲ್‍ನ ಸೇಂಟ್ ಜಾರ್ಜ್ ಚರ್ಚ್‍ನಲ್ಲಿ ಮೊದಲಿನಿಂದಲೂ ಇದ್ದ ಪೆಟ್ಟಿಗೆಯಲ್ಲಿ ಸಮಾಧಿ ಮಾಡುವ ಸಂಸ್ಕೃತಿಯನ್ನು ಅಂತ್ಯಗೊಳಿಸಲಾಗಿದೆ.
Advertisement
Advertisement
ಪೆಟ್ಟಿಗೆಯಲ್ಲಿ ಹೂಳಿದ್ದ ಶವಗಳು ಎಷ್ಟೇ ವರ್ಷಗಳಾದರೂ ಕೊಳೆಯದ ಕಾರಣ ಈ ಪದ್ಧತಿಯನ್ನು ಕೈಬಿಡಲಾಗಿದೆ. ಪೆಟ್ಟಿಗೆಯ ಬದಲು ಶವವನ್ನು ಬಟ್ಟೆಯಲ್ಲಿ(Cloth) ಸುತ್ತಿ ಸಮಾಧಿ ಮಾಡಲು ಇದೀಗ ಆಲಪ್ಪುಳ ಜಿಲ್ಲೆಯ ಅಥುರ್ಂಕಲ್‍ನ ಸೇಂಟ್ ಜಾರ್ಜ್ ಚರ್ಚ್ ನಿರ್ಧರಿಸಿದೆ. ಈ ಮೂಲಕ ಬಹು ಹಳೆಯ ಸಂಸ್ಕೃತಿಯಾಗಿರುವ ಪೆಟ್ಟಿಗೆಯಲ್ಲಿ ಹೂಳುವ ಸಂಸ್ಕೃತಿಯು ಅಂತ್ಯಗೊಂಡಿದೆ. ಇದನ್ನೂ ಓದಿ: ಜನೋತ್ಸವ ಕಾರ್ಯಕ್ರಮ ನಿಗದಿಯಂತೆ ನಾಳೆ ನಡೆಯಲಿದೆ: ಸುಧಾಕರ್
Advertisement
Advertisement
ಈ ಬಗ್ಗೆ ಅಲ್ಲಿನ ಪಾದ್ರಿ ಮಾತನಾಡಿ, ನಮಗೆ ಸಮುದ್ರ ಹತ್ತಿರದಲ್ಲಿರುವುದರಿಂದ ಮಣ್ಣಿನಲ್ಲಿ ಲವಣಾಂಶದ ಪ್ರಮಾಣವು ತುಂಬಾ ಹೆಚ್ಚಾಗಿದೆ. ಇದರಿಂದಾಗಿ ಮರದ ಪೆಟ್ಟಿಗೆಗಳಲ್ಲಿ ಶವವು ಕೊಳೆತು ಮಣ್ಣನ್ನು ಸೇರಲು ತುಂಬಾ ವಿಳಂಬವಾಗುತ್ತಿದೆ. ಐದಾರು ವರ್ಷಗಳಾದರೂ ಸಮಾಧಿಯಲ್ಲಿರುವ ಶವಗಳು ಸಂಪೂರ್ಣವಾಗಿ ಕೊಳೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶವಪೆಟ್ಟಿಗೆಗೆ ಅಂತ್ಯ ಹಾಡಲು ನಿರ್ಧರಿಸಿದ್ದೇವೆ. ಇದರ ಬದಲಾಗಿ ಬಟ್ಟೆಯನ್ನು ಸುತ್ತಿ ಹೂಳುವ ಪ್ರಕ್ರಿಯೆಯನ್ನು ನಡೆಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯನ್ನು ಪಾಕಿಸ್ತಾನದಿಂದ ಆರಂಭಿಸಬೇಕಿತ್ತು: ಹಿಮಾಂತ ಬಿಸ್ವಾ ಶರ್ಮಾ