ವಿಶ್ವಾದ್ಯಂತ ಕ್ರಿಸ್‌ಮಸ್ ಹಬ್ಬದ ಸಂಭ್ರಮ, ಸಡಗರ ಜೋರಾಗಿದೆ. ಹಾಗೆಯೇ ಸೆಲೆಬ್ರೆಟಿಗಳ ಮನೆಯಲ್ಲೂ ಕ್ರಿಸ್‌ಮಸ್ ಹಬ್ಬ (Christmas Festival) ಕಳೆಗಟ್ಟಿದೆ. ರಾಧಿಕಾ ಪಂಡಿತ್, ರಶ್ಮಿಕಾ, ಐಶ್ವರ್ಯ ರೈ ಸೇರಿದಂತೆ ಹಲವರು ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.
Advertisement
ಸ್ಯಾಂಡಲ್‌ವುಡ್ (Sandalwood) ನಟಿ ರಾಧಿಕಾ ಪಂಡಿತ್ (Radhika Pandit) ಪ್ರತಿ ವರ್ಷದಂತೆ ಈ ವರ್ಷವು ಕೂಡ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದ್ದಾರೆ. ಇತ್ತೀಚೆಗೆ ಐರಾ ಮತ್ತು ಯಥರ್ವ್ ಕ್ರಿಸ್‌ಮಸ್‌ಗೆ ಕುಕ್ಕೀಸ್ ಮಾಡ್ತಿರುವ ಫೋಟೋಗಳನ್ನ ನಟಿ ಶೇರ್ ಮಾಡಿದ್ದರು.
Advertisement
View this post on Instagram
Advertisement
ಐಶ್ವರ್ಯ ರೈ (Aishwarya Rai) ಕೂಡ ಮುದ್ದು ಮಗಳು ಆರಾಧ್ಯ ಜೊತೆಗಿನ ಕ್ರಿಸ್‌ಮಸ್ ಸಂಭ್ರಮದ ಫೋಟೋವನ್ನ ಹಂಚಿಕೊಂಡಿದ್ದರು. ಈ ಮೂಲಕ ಎಲ್ಲರಿಗೂ ನಟಿ ಶುಭ ಹಾರೈಸಿದ್ದರು. ಇದನ್ನೂ ಓದಿ: ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ನಟಿ ರಾಕುಲ್ ಲವ್ಲಿ ವಿಶ್
Advertisement
View this post on Instagram
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ರಶ್ಮಿಕಾ(Rashmika Mandanna), ಸಿನಿಮಾಗಳಿಗೆ ಬ್ರೇಕ್ ಕೊಟ್ಟು ಕ್ರಿಸ್‌ಮಸ್ ಫೆಸ್ಟಿವಲ್ ಆಚರಣೆ ಮಾಡಿದ್ದಾರೆ. ಕ್ರಿಸ್‌ಮಸ್ ಟ್ರಿ ಪಕ್ಕ ನಿಂತಿರುವ ಚೆಂದದ ಫೋಟೋವನ್ನ ಶೇರ್ ಮಾಡಿದ್ದಾರೆ.
View this post on Instagram
ಬಾಲಿವುಡ್ ನಟಿ ಪ್ರೀತಿ ಜಿಂಟಾ (Preethi Zinta) ಮನೆಯಲ್ಲಿ ಕ್ರಿಸ್‌ಮಸ್ ಹಬ್ಬ ಆಚರಿಸಲಾಗಿದೆ. ಈ ಕುರಿತ ವಿಡಿಯೋವನ್ನ ನಟಿ ಶೇರ್ ಮಾಡಿದ್ದಾರೆ. ಹಬ್ಬದ ಪ್ರಯುಕ್ತ ಎಲ್ಲರಿಗೂ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.
View this post on Instagram
ನಟಿ ಕರಿಷ್ಮಾ ಕಪೂರ್ (Karishma Kapoor) ಅವರು ಸಾಂತಾ ಕ್ಲಾಸ್ ರೀತಿ ಡ್ರೆಸ್ ಮಾಡಿಕೊಂಡಿದ್ದಾರೆ. ಕ್ರಿಸ್‌ಮಸ್ ಟ್ರೀ ಎದುರು ಕುಳಿತು, ತಮ್ಮ ಮುದ್ದು ಶ್ವಾನದ ಜೊತೆ ಅವರು ಪೋಸ್ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.