ಮಂಗಳೂರು: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಭಾನುವಾರ ಮಂಗಳೂರಿಗೆ ಆಗಮಿಸಿದ್ರು. ಸ್ಮಿರ್ನ್ ಆಫ್ ಸಂಸ್ಥೆಯ ಹೊಸ ಉತ್ಪನ್ನ ಬಿಡುಗಡೆಗಾಗಿ ಮಂಗಳೂರಿನ ಜ್ಯೋತಿ ಸರ್ಕಲ್ ಬಳಿಯ ಬಲ್ಮಠದಲ್ಲಿರುವ ವೈನ್ ಗೇಟ್‍ಗೆ ಆಗಮಿಸಿದ ಸ್ಟಾರ್ ಆಟಗಾರ ಗೇಲ್‍ರನ್ನು ಮಂಗಳಾರತಿ ಎತ್ತಿ ತಿಲಕವಿಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ತದನಂತರ ಹೊಡಿಬಡಿ ಆಟಗಾರನಿಗೆ ಎಳನೀರು ನೀಡಿ ಸತ್ಕರಿಸಲಾಯಿತು. ವೈನ್ ಗೇಟ್ ಮುಖ್ಯಸ್ಥ ರಮೇಶ್ ನಾಯಕ್ ಹೂಗುಚ್ಛ ನೀಡಿ ಸ್ವಾಗತಿಸಿದರು.
Advertisement
ಸ್ಮಿರ್ನ್ ಆಫ್ ಸಂಸ್ಥೆಯ ಕೆಂಪು ಬಣ್ಣದ ಟೀ ಶರ್ಟ್ ತೊಟ್ಟು ಆಗಮಿಸಿದ ಗೇಲ್, ಸ್ಮಿರ್ನ್ ಆಫ್ ಸಂಸ್ಥೆಯ ನೂತನ ಉತ್ಪನ್ನವೊಂದನ್ನು ಬಿಡುಗಡೆಗೊಳಿಸಿದ್ರು. ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಐಪಿಎಲ್ ಆಟಗಾರ ಗೇಲ್‍ರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಮುಗಿಬಿದ್ದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಲು ಹರಸಾಹಸ ಪಟ್ಟುಕೊಂಡರು. ಅಭಿಮಾನಿಗಳು ಗೇಲ್ ಅವರಿಂದ ಬ್ಯಾಟ್‍ಗಳ ಮೇಲೆ ಆಟೋಗ್ರಾಫ್ ಪಡೆದರು. ಈ ವೇಳೆ ಖಾಸಗಿ ಹಾಗೂ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಯಿತು.
Advertisement
Advertisement