ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಹೊಸ ದಾಖಲೆಯನ್ನು ನಿರ್ಮಿಸಿದ್ದು, ಐಪಿಎಲ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಐಪಿಎಲ್ ಲೀಗ್‍ನಲ್ಲಿ ಗೇಲ್ ಇದುವರೆಗೂ 302 ಸಿಕ್ಸರ್ ಗಳನ್ನು ಸಿಡಿಸಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸಿ ಸಂಖ್ಯೆಯನ್ನು 302ಕ್ಕೆ ಹೆಚ್ಚಳ ಮಾಡಿದರು.
Advertisement
Advertisement
ಈ ಪಟ್ಟಿಯಲ್ಲಿ ಬೇರೆ ಯಾವುದೇ ಆಟಗಾರ ಸಮೀಪದ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ. 2ನೇ ಸ್ಥಾನದಲ್ಲಿರುವ ಎಬಿಡಿ ವಿಲಿಯರ್ಸ್ 192 ಸಿಕ್ಸರ್, 187 ಸಿಕ್ಸರ್ ಗಳೊಂದಿಗೆ ಧೋನಿ 3ನೇ ಸ್ಥಾನ ಪಡೆದಿದ್ದಾರೆ. 4ನೇ ಸ್ಥಾನದಲ್ಲಿ 186 ಸಿಕ್ಸರ್ ಗಳೊಂದಿಗೆ ಸುರೇಶ್ ರೈನಾ ಇದ್ದಾರೆ.
Advertisement
ಗೇಲ್ ತಮ್ಮ ಮೊದಲ ಸಿಕ್ಸರ್ ಗಳ ಶತಕವನ್ನು 37 ಇನ್ನಿಂಗ್ಸ್ ಗಳಲ್ಲಿ ಪೂರೈಸಿದ್ದರು. ಆ ಬಳಿಕ 69ನೇ ಇನ್ನಿಂಗ್ಸ್ ವೇಳೆ ಸಿಕ್ಸರ್ ದ್ವಿಶತಕದ ಹಾಗೂ 144 ಇನ್ನಿಂಗ್ಸ್ ವೇಳೆಗೆ ಸಿಕ್ಸರ್ ಗಳ ತ್ರಿಶತಕ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಗೇಲ್ 24 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 40 ರನ್ ಗಳಿಸಿ ಔಟಾದರು.
Advertisement
The Universe Boss @henrygayle becomes the first person to breach the 300 IPL sixes mark ???????????? pic.twitter.com/4T7LTCRTfI
— IndianPremierLeague (@IPL) March 30, 2019
ಕೆಎಲ್ ರಾಹುಲ್ ಅರ್ಧ ಶತಕ: ಮುಂಬೈ ಇಂಡಿಯನ್ಸ್ ನೀಡಿದ 177 ರನ್ ಗಳ ಸವಾಲಿನ ಗುರಿಯನ್ನು ಪಂಜಾಬ್ ಸುಲಭವಾಗಿ ಬೆನ್ನತ್ತಿ 18.4 ಓವರ್ ಗಳಲ್ಲಿ ಗೆಲುವು ಪಡೆಯಿತು. ಪಂಜಾಬ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಎಲ್ ರಾಹುಲ್ 6ಬೌಂಡರಿ, ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಸಿಡಿಸಿದರು. ಇತ್ತ ಮಯಾಂಕ್ ಕೂಡ 43 ರನ್ ಗಳಿಸಿ ಗಮನ ಸೆಳೆದರು.