ನವದೆಹಲಿ: ಗಣರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಇಡೀ ದೇಶವೇ ಗಣರಾಜ್ಯೋತ್ಸವದ ಸಿದ್ಧತೆಯಲ್ಲಿ ತೊಡಗಿದೆ. ದೆಹಲಿಯ ರಾಜಪಥನಲ್ಲಿ ಪರೇಡ್‌ಗಾಗಿ ಸೈನಿಕರು ಪೂರ್ಣ ಉಡುಗೆಯಲ್ಲಿ ಪೂರ್ವಾಭ್ಯಾಸ ಮಾಡಿದವು. ಇನ್ನೊಂದೆಡೆ ಹೆಲಿಕಾಪ್ಟರ್‌ಗಳು ಇಂದು ದೆಹಲಿಯ ರಾಜ್‌ಪಥ್‌ನ ಮೇಲೆ ಹಾರಾಡಿದವು.
ಪ್ರತಿ ವರ್ಷ ಪರೇಡ್ ಸ್ಥಳದಲ್ಲಿ ನಡೆಯುವ ಪೂರ್ವ ಸಿದ್ಧತೆಯನ್ನು ವೀಕ್ಷಿಸಲು ಪ್ರೇಕ್ಷಕರು ಜಮಾಯಿಸಿದ್ದರು. ಈ ದೃಶ್ಯವು ರಾಜಪಥ ಸ್ಥಳದಿಂದ ರಾಷ್ಟ್ರಪತಿ ಭವನದವೆರೆಗೂ ನೋಡಬಹುದಾಗಿತ್ತು. ನಾಲ್ಕು ಮಿಗ್-17 ಹೆಲಿಕಾಪ್ಟರ್‌ಗಳು ವೈನ್‌ಗ್ಲಾಸ್ ರಚನೆಯಲ್ಲಿ ಹಾರಾಡುತ್ತಿದ್ದವು. ಇದನ್ನು ನೋಡಲು ಜನಸಂದಣಿಯೇ ತುಂಬಿತ್ತು. ರಾಷ್ಟ್ರ ಲಾಂಛನ ಹಾಗೂ ಸೇವಾ ಚಿಹ್ನೆಗಳು ಈ ಹೆಲಿಕಾಪ್ಟರ್ ಮೇಲಿದ್ದವು.
Advertisement
#WATCH | Republic day full-dress rehearsal underway at Rajpath, Delhi. pic.twitter.com/DooaOcXAft
— ANI (@ANI) January 23, 2022
Advertisement
ಭಾರತೀಯ ಸೈನಿಕರು ಗಣರಾಜ್ಯೋತ್ಸವಕ್ಕಾಗಿ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಪರೇಡ್ ಮಾಡುವ ಮೂಲಕ ಗಮನ ಸೆಳೆದರು. ಮೊದಲ ಬಾರಿಗೆ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ನೆನಪಿಗಾಗಿ ಈ ಬಾರಿಯ ಗಣರಾಜ್ಯೋತ್ಸವವು ಇಂದಿನಿಂದಲೇ ಪ್ರಾರಂಭಗೊಳ್ಳಲಿದೆ. ಪ್ರತಿ ವರ್ಷ ಜನವರಿ 24 ರಂದು ಪ್ರಾರಂಭಗೊಳ್ಳುತ್ತಿತ್ತು. ಇದನ್ನೂ ಓದಿ: ನೇತಾಜಿ ಜನ್ಮ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿ: ಮಮತಾ ಬ್ಯಾನರ್ಜಿ
Advertisement
Advertisement
ಇಂದು ಸಂಜೆ 6 ಗಂಟೆಗೆ ಇಂಡಿಯಾ ಗೇಟ್‌ನಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್‌ರ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ದೇಶಕ್ಕೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ