ಕಾರವಾರ: ಕ್ಲೋರಿನ್ ಸೋರಿಕೆಯಾಗಿ (Chlorine leak) 18 ಜನ ಕಾರ್ಮಿಕರು ಅಸ್ವಸ್ಥರಾದ ಘಟನೆ ಕಾರವಾರದ (Karwar) ಬಿಣಗಾದಲ್ಲಿನ ಗ್ರಾಸಿಂ ಇಂಡಸ್ಟ್ರೀಸ್‍ನಲ್ಲಿ (Grasim Industrie) ನಡೆದಿದೆ.
ಶನಿವಾರ ಮಧ್ಯಾಹ್ನದ ವೇಳೆ ಕಾರ್ಖಾನೆಯಲ್ಲಿ ವಿದ್ಯುತ್ ಸಮಸ್ಯೆಯಿಂದ ಕ್ಲೋರಿನ್ ಸ್ಟೋರ್‍ನಲ್ಲಿ ಲೀಕ್ ಆಗಿದೆ. ಇದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ 18 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಕಾರ್ಮಿಕರು ಕರ್ನಾಟಕ, ಉತ್ತರಪ್ರದೇಶ, ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.
Advertisement
Advertisement
ಅಸ್ವಸ್ಥಗೊಂಡ 14 ಕಾರ್ಮಿಕರಿಗೆ ಕಾರವಾರದ ಕ್ರಿಮ್ಸ್ ಆಸ್ಪತ್ರೆ ಹಾಗೂ ಗ್ರಾಸಿಂ ಪ್ರಥಮ ಚಿಕಿತ್ಸಾ ಘಟಕದಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕರು ಉಸಿರಾಟ, ಕೆಮ್ಮಿನಿಂದ ಬಳಲುತಿದ್ದಾರೆ. ಯಾರ ಜೀವಕ್ಕೂ ಆಪಾಯವಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಕ್ಲೋರಿನ್ ಲೀಕ್ ಆದರೂ ಕಾರ್ಖಾನೆ ಆಡಳಿತ ಸೈರನ್ ಸಹ ಹಾಕದೇ ನಿರ್ಲಕ್ಷ ಮಾಡಿದ್ದಾರೆ. ಇದರಿಂದ ಕಾರ್ಮಿಕರಿಗೆ ಹಾಗೂ ಸ್ಥಳೀಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಕಾರ್ಖಾನೆ ಎದುರು ಕಾರ್ಮಿಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.