ಚಿತ್ರದುರ್ಗ: ಕ್ಲೋರಿನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 40ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ (Chitradurga) ಹೊಸದುರ್ಗ (Hosadurga) ಪಟ್ಟಣದಲ್ಲಿ ನಡೆದಿದೆ.
ನೀರು ಶುದ್ಧೀಕರಣಕ್ಕೆ ಬಳಸುವ ಕ್ಲೋರಿನ್ ಗ್ಯಾಸ್ ವಾಟರ್ ಟ್ಯಾಂಕ್ ಬಳಿ ಲೀಕ್ (Chlorine Gas Leak) ಆಗಿದೆ. ಇದರಿಂದ ಎಪಿಎಂಸಿ ಬಳಿಯ ಅಕ್ಕಪಕ್ಕದ ನಿವಾಸಿಗಳು ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿದ್ದಾರೆ. ಅಲ್ಲದೇ ಈ ವೇಳೆ ವಾಂತಿಯೂ ಆಗಿದೆ. ಕೂಡಲೇ ಅಸ್ವಸ್ಥರನ್ನು ತಕ್ಷಣ ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
15 ಕ್ಕೂ ಹೆಚ್ಚು ಜನರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. 20ಕ್ಕೂ ಅಧಿಕ ಮಹಿಳೆಯರು ಹಾಗೂ ಮಕ್ಕಳನ್ನು ಮುಂಜಾಗ್ರತೆಯಿಂದ ತಪಾಸಣೆಗೊಳಪಡಿಸಲಾಗಿದೆ.
ಈ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಿಪಿಐ ತಿಮ್ಮಣ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.