ಮೈಸೂರು: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ(Chitradurga Vidhan Sabha Constituency) ಕಾಂಗ್ರೆಸ್(Congress) ಟಿಕೆಟ್ ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್‌ಗೆ ನೀಡುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರೇ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ಎಚ್.ಡಿ. ಕೋಟೆಯಲ್ಲಿ ಇಂದು ನಡೆದ ವಿಶ್ವಕರ್ಮ ಸಮುದಾಯದ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿಶ್ವ ಕರ್ಮ ಸಮುದಾಯದ ರಘು ಅಚಾರ್(Raghu Achar) ಚಿತ್ರದುರ್ಗದ ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ಕೇಳುತ್ತಿದ್ದಾನೆ. ನೋಡೋಣಾ ತಡಿ ಎಂದು ಹೇಳಿದ್ದೇನೆ ಎಂದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ
Advertisement
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ಇಂದು ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭವನ್ನು ಉದ್ಘಾಟಿಸಿ, ಶುಭ ಹಾರೈಸಿದೆ. ಸಮುದಾಯದ ಪೀಠಾಧೀಶರಾದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಶಾಸಕರಾದ ಜಿ.ಟಿ. ದೇವೇಗೌಡ, ಅನಿಲ್ ಚಿಕ್ಕಮಾದು, ಕೆ.ಪಿ. ನಂಜುಂಡಿ, ಮಾಜಿ ಶಾಸಕ ರಘು ಆಚಾರ್ ಹಾಜರಿದ್ದರು. pic.twitter.com/7Jz98bAmf7
— Siddaramaiah (@siddaramaiah) October 27, 2022
ಈ ನಡುವೆ ರಘು ಆಚಾರ್‌ಗೆ ಟಿಕೆಟ್ ಬಹಿರಂಗವಾಗಿ ಘೋಷಿಸಿ ಎಂದು ಸಿದ್ದರಾಮಯ್ಯನವರಿಗೆ ಅದೇ ವೇದಿಕೆಯಲ್ಲಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ(K. P. Nanjundi) ಚೀಟಿಯಲ್ಲಿ ಬರೆದು ಕೊಟ್ಟರು. ಆಗ ಸಿದ್ದರಾಮಯ್ಯ, ಹೇ, ಸುಮ್ನಿರಯ್ಯ. ನನ್ನ ಏನೂ ಮಾಡಬೇಕು ಅಂದು ಕೊಂಡಿದ್ದಿಯಾ? ನಾನು ರಘು ಆಚಾರ್‌ಗೂ ಹೇಳಿದ್ದೇನೆ. ಸ್ವಾಮೀಜಿಗೂ ಹೇಳಿದ್ದೇನೆ. ನೀನು ವೈಯಕ್ತಿಕವಾಗಿ ಸಿಗು ನಿನಗೂ ಅದನ್ನು ಹೇಳುತ್ತೇನೆ ಎಂದು ಟಿಕೆಟ್ ನಿಶ್ಚಿತ ಎಂಬ ಸುಳಿವು ನೀಡಿದರು.