ಚಿತ್ರದುರ್ಗ: ಮುಂಬೈ ಪೊಲೀಸರೆಂದು ನಂಬಿಸಿ ಹಿರಿಯ ವೈದ್ಯರೊಬ್ಬರಿಂದ 1.27 ಕೋಟಿ ರೂ. ದೋಚಿದ್ದ ಸೈಬರ್ ವಂಚಕರನ್ನು ಬಂಧಿಸುವಲ್ಲಿ ಚಿತ್ರದುರ್ಗದ (Chitradurga) ಸೆನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗದ ಹಿರಿಯ ವೈದ್ಯ ಶ್ರೀನಿವಾಸ್ ಶೆಟ್ಟಿಗೆ ಆಗಸ್ಟ್ 23 ರಂದು ವಾಟ್ಸಪ್ ಹಾಗೂ ನಾರ್ಮಲ್ ಕರೆ ಮಾಡಿದ್ದ ವಂಚಕರು, ನಾವು ಟಿಆರ್‌ಎಐ & ಮುಂಬೈ(Mumbai) ಪೊಲೀಸರೆಂದು ಹೇಳಿದ್ದು, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ಅಲ್ಲದೇ ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ತಮ್ಮ ಖಾತೆಗೆ 1.27 ಕೋಟಿ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ – ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆಯಲ್ಲಿ ಏರಿಕೆ
Advertisement
ಇದರಿಂದಾಗಿ ಕಂಗಾಲಾದ ವೈದ್ಯ ಶ್ರೀನಿವಾಸ್ ಶೆಟ್ಟಿಯವರು ಆಗಸ್ಟ್ 26 ರಂದು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ವಂಚಕರ ಜಾಡನ್ನು ಬೆನ್ನತ್ತಿದ್ದ ಪೊಲೀಸರು, ಅಸ್ಸಾಂ ಮೂಲದ ಆರೋಪಿ ಪವನ್ ಕುಮಾರ್, ಜಾಕೀರ್ ಬೋರಾ ಎಂಬ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ವಂಚಿತರಿಂದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದ 16.89 ಲಕ್ಷ ರೂ. ಫ್ರೀಜ್ ಮಾಡಲಾಗಿದೆ. ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಈ ಸಂಬಂಧ ಚಿತ್ರದುರ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು – ಪ್ರಕರಣ ಭೇದಿಸಿದ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ