ಬೆಂಗಳೂರು: ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಈ ಚಿತ್ರ ವಿಭಿನ್ನವಾದ ಪೋಸ್ಟರ್ ಮೂಲಕವೇ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಚಿತ್ರೀಕರಣದ ಹಂತದಲ್ಲಿಯೇ ಚಿತ್ರಕಥಾ ವೆರೈಟಿ ಪೋಸ್ಟರ್‍ಗಳ ಮೂಲಕ ಸದ್ದು ಮಾಡಿತ್ತು. ಇಡೀ ಚಿತ್ರದ ನವೀನ ಕಥೆಯ ಸುಳಿವು ಇಂಥಾ ಪೋಸ್ಟರ್‍ಗಳ ಮೂಲಕವೇ ಸಿಕ್ಕಿ ಬಿಟ್ಟಿತ್ತು. ಆ ನಂತರದಲ್ಲಿ ಶ್ರೀಮುರುಳಿ ಬಿಡುಗಡೆ ಮಾಡಿದ್ದ ಟ್ರೈಲರ್ ಮೂಲಕವೇ ಈ ಸಿನಿಮಾ ಪಡೆದುಕೊಂಡ ಪ್ರಚಾರ ಅಚ್ಚರಿದಾಯಕವಾದದ್ದು.
Advertisement
ಪ್ರಜ್ವಲ್ ಎಂ ರಾಜ ನಿರ್ಮಾಣ ಮಾಡಿರೋ ಈ ಚಿತ್ರದ ತುಂಬಾ ಯುವ ಆವೇಗವೇ ತುಂಬಿಕೊಂಡಿದೆ. ಆದರೆ ಹೊಸಬರೇ ಇದ್ದರೂ ಚಿತ್ರ ಮಾತ್ರ ಮಾಗಿದ ಕಥೆಯನ್ನೊಳಗೊಂಡಿದೆ ಎಂಬ ವಿಚಾರ ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಈ ಮೂಲಕವೇ ಯುವ ಪ್ರತಿಭೆ ಸುಜಿತ್ ರಾಥೋಡ್ ನಾಯಕನಾಗಿಯೂ ಎಂಟ್ರಿ ಕೊಡುತ್ತಿದ್ದಾರೆ. ಇದೇ ರೀತಿ ಸದರಿ ಚಿತ್ರ ತಾಂತ್ರಿಕವಾಗಿಯೂ ಮಾಂತ್ರಿಕ ಮೋಡಿ ಮಾಡಲು ರೆಡಿಯಾಗಿದೆ.
Advertisement
Advertisement
ಈ ಚಿತ್ರದ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಈ ಹಿಂದೆ ಹಲವಾರು ವರ್ಷಗಳ ಕಾಲ ತಾಂತ್ರಿಕ ವಿಭಾಗದಲ್ಲಿಯೂ ಅನುಭವ ಹೊಂದಿರುವವರು. ಹಾಗೆ ಸಾಗಿ ಬಂದು ನಿರ್ದೇಶಕರಾಗಿರೋ ಅವರು ತಮ್ಮ ಚೊಚ್ಚಲ ಚಿತ್ರವನ್ನು ತಾಂತ್ರಿಕವಾಗಿಯೂ ಬೆರಗಾಗುವಂಥಾ ಶೈಲಿಯಲ್ಲು ರೂಪಿಸಿದ ಭರವಸೆಯಿಂದಿದ್ದಾರೆ. ಸ್ಕ್ರೀನ್ ಪ್ಲೇ ಸೇರಿದಂತೆ ಎಲ್ಲದರಲ್ಲಿಯೂ ಪ್ರಯೋಗಾತ್ಮಕ ಅಂಶಗಳನ್ನು ಹೊಂದಿರೋ ಈ ಚಿತ್ರ ಕಮರ್ಶಿಯಲ್ ಚಹರೆಯೊಂದಿಗೆ ಮ್ಯಾಜಿಕ್ ಮಾಡುವ ತಯಾರಿಯಲ್ಲಿದೆ.
Advertisement
ಇದೆಲ್ಲ ವಿಶೇಷತೆಗಳ ಜೊತೆಯಲ್ಲಿಯೇ ಭರ್ಜರಿಯಾದ ತಾರಾಗಣದ ಸಾಥ್ ಕೂಡಾ ಈ ಚಿತ್ರಕ್ಕಿದೆ. ತಬಲಾ ನಾಣಿ, ಸುಧಾ ರಾಣಿ, ಬಿ ಜಯಶ್ರೀ, ದಿಲೀಪ್ ರಾಜ್ ಮತ್ತು ಅಗ್ನಿಸಾಕ್ಷಿ ರಾಧಿಕಾ ಸೇರಿದಂತೆ ಅನೇಕ ಕಲಾವಿದರು ಈ ತಾರಾಗಣದಲ್ಲಿದ್ದಾರೆ. ಹೀಗೆ ಎಲ್ಲ ಥರದಲ್ಲಿಯೂ ಕುತೂಹಲಕ್ಕೆ ಕಾರಣವಾಗಿರೋ ಚಿತ್ರಕಥಾ ಇದೇ ವಾರ ಅಂದರೆ ಹನ್ನೆರಡನೇ ತಾರೀಕಿನಂದು ಬಿಡುಗಡೆಯಾಗಲಿದೆ.