ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ನಟನೆಯ `ಚಿರು 154′ ಸಿನಿಮಾಗೆ ಶೃತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೀಗ ಚಿತ್ರದ ಡೇಟ್ ಕೂಡ ಅನೌನ್ಸ್ ಆಗಿದ್ದು, ಸಂಕ್ರಾಂತಿ ಹಬ್ಬಕ್ಕೆ ತೆರೆಯ ಮೇಲೆ ಕ್ರಾಂತಿ ಏಬ್ಬಿಸಲು ರೆಡಿಯಾಗಿದ್ದಾರೆ.
ತೆರೆಯ ಮೇಲೆ ಮೊದಲ ಬಾರಿಗೆ ಒಂದಾಗುತ್ತಿರುವ ಜೋಡಿ ಚಿರಂಜೀವಿ ಮತ್ತು ಶೃತಿ ಹಾಸನ್ ಈ ಚಿತ್ರದ ಕುರಿತು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ತೆರೆಯ ಮರೆಯಲ್ಲಿ ಸಿನಿಮಾಗಾಗಿ ಸಖತ್ ಕರಸತ್ತು ನಡೆಯುತ್ತಿದೆ. ಹೀಗಿರುವಾಗ ತಮ್ಮ ಅಭಿಮಾನಿಗಳಿಗೆ ಚಿರು ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಚಿರು 154′ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ಬರಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ:ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ನಿರೀಕ್ಷಿತ ಚಿತ್ರ `ಚಿರು 154′ ಚಿತ್ರಕ್ಕೆ ಕೆ.ಎಸ್ ರವೀಂದ್ರ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಎಂದೂ ಮಾಡಿರದ ಪಾತ್ರದಲ್ಲಿ ಮೆಗಾಸ್ಟಾರ್ ಸಜ್ಜಾಗಿದ್ದಾರೆ.ಮುಂದಿನ ಸಂಕ್ರಾಂತಿ 2023ಕ್ಕೆ ಬೆಳ್ಳಿಪರದೆ ಮಿಂಚಲಿದ್ದಾರೆ. ಚಿತ್ರದ ಟೈಟಲ್ ಮತ್ತು ಚಿತ್ರ ಇನ್ನುಳಿದ ಪಾತ್ರ ವರ್ಗದ ಬಗ್ಗೆ ಸದ್ಯದಲ್ಲೇ ರಿವೀಲ್ ಮಾಡಲಿದೆ ಚಿತ್ರತಂಡ.
Box office veta ku Langaru tayaaru ⚓????#Mega154 Grand Worldwide Release in Cinemas this Sankranthi 2023 ????????#Mega154ForSankranthi ????
Megastar @KChiruTweets @shrutihaasan @dirbobby @ThisIsDSP pic.twitter.com/FAbukAEjF8
— Mythri Movie Makers (@MythriOfficial) June 24, 2022
ನಟಿ ಶೃತಿ ಹಾಸನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಚಿರಂಜೀವಿ ನಟನೆಯ ಈ ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಮಿಂಚಲಿದ್ದಾರೆ. ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಹೈಪ್ ಕ್ರಿಯೆಟ್ ಮಾಡಿರುವ ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ.