ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ

Public TV
2 Min Read
acharya film 1

ಸಿನಿಮಾಗಳು ಲಾಸ್ ಆದಾಗ ಆ ಚಿತ್ರದ ಹೀರೋಗಳು ವಿತರಕರಿಗೆ ಅಥವಾ ನಿರ್ಮಾಪಕರಿಗೆ ಒಂದಷ್ಟು ಹಣವನ್ನು ವಾಪಸ್ಸು ಮಾಡಿದ ಉದಾಹರಣೆಗಳನ್ನು ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಕೇಳುತ್ತಲೇ ಇರುತ್ತೇವೆ. ಅದರಲ್ಲೂ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ವಿತರಕರು ಕೈ ಸುಟ್ಟುಕೊಂಡಾಗ ಅವರ ನೆರವಿಗೆ ಅನೇಕ ಬಾರಿ ರಜನಿಕಾಂತ್ ಅವರು ನಿಂತದ್ದು ಇದೆ. ಇದೇ ಮೊದಲ ಬಾರಿಗೆ ನಿರ್ದೇಶಕರೊಬ್ಬರು ತಮ್ಮ ಸಿನಿಮಾ ಸೋಲಿನ ಹೊಣೆಹೊತ್ತು ಸಂಭಾವನೆಯನ್ನು ಹಿಂದುರಿಗಿಸಲು ಮುಂದಾಗಿದ್ದಾರಂತೆ. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ

acharya film 4

ಇತ್ತೀಚೆಗೆ ಬಿಡುಗಡೆಯಾದ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತು. ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಚಿರಂಜೀವಿ ಸಿನಿಮಾಗಳು ಅಂದರೆ, ನೂರಾರು ಕೋಟಿ ರೂಪಾಯಿ ಕೊಟ್ಟು ವಿತರಣಾ ಹಕ್ಕುಗಳನ್ನು ಪಡೆದಿರುತ್ತಾರೆ. ಹಾಗಾಗಿ ವಿತರಕರಿಗೆ ನೂರಾರು ಕೋಟಿ ಲಾಸ್ ಆಗಿದೆ. ಸ್ವತಃ ವಿತರಕರೆ ತಮಗೆ ಹಣ ವಾಪಸ್ಸು ಮಾಡುವಂತೆ ಕೇಳಿದ್ದರು. ಹೀಗಾಗಿ ಸಿನಿಮಾ ಸೋಲಿನ ಹೊಣೆಯನ್ನು ನಿರ್ದೇಶಕ ಕೊರಟಾಲ ಶಿವ ಹೊತ್ತಿದ್ದಾರಂತೆ. ಹಾಗಾಗಿ ಮೂವತ್ತು ಕೋಟಿಗೂ ಅಧಿಕ ಹಣವನ್ನು ವಾಪಸ್ಸು ಮಾಡಿದ್ದಾರಂತೆ. ಇದನ್ನೂ ಓದಿ: ರೆಡ್ ಕಲರ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್

acharya film 2

ವಿದೇಶ ಪ್ರವಾಸದಲ್ಲಿದ್ದ ಚಿರಂಜೀವಿ ಇದೀಗ ವಾಪಸ್ಸಾಗಿದ್ದಾರೆ. ಯಾವ ಏರಿಯಾದಿಂದ ಎಷ್ಟೆಷ್ಟು ಹಣ ಬಂದಿದೆ ಎಂದು ಲೆಕ್ಕಾಚಾರ ಹಾಕಿಸಿ, ಯಾರಿಗೆ ಎಷ್ಟು ಹಣವನ್ನು ಮರಳಿಸಬೇಕು ಎಂದು ಲೆಕ್ಕಹಾಕಿಸಿದ್ದಾರಂತೆ. ಸಿನಿಮಾ ಟೀಮ್‍ನಲ್ಲಿ ಯಾರು ಎಷ್ಟೆಷ್ಟು ಹಣ ಕೊಡಬೇಕು ಎಂದು ಸೂಚಿಸಿದ್ದರಂತೆ. ನಿರ್ದೇಶಕ ಕೊರಟಾಲ ಶಿವ ಅವರು ಚಿರಂಜೀವಿ ಅವರು ಹೇಳಿದ್ದಕ್ಕಿಂತಲೂ ಹೆಚ್ಚಿನ ಹಣ ನೀಡಿದ್ದಾರೆ ಎನ್ನುವ ಸುದ್ದಿಯಿದೆ. ಇದನ್ನೂ ಓದಿ: ಹೇಗಿದ್ದೀರಾ, ಚೆನ್ನಾಗಿದ್ದೀರಾ? ಎಂದು ಕೇಳುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ : ಧ್ರುವ ಸರ್ಜಾ

acharya film 3

ಕೇವಲ ಕೊರಟಾಲ ಶಿವ ಮಾತ್ರವಲ್ಲ ಚಿರಂಜೀವಿ ಕೂಡ ಹಣವನ್ನು ವಾಪಸ್ಸು ಮಾಡಿದ್ದಾರಂತೆ. ಅಲ್ಲದೇ, ಅವಶ್ಯ ಬಿದ್ದರೆ ಮತ್ತಷ್ಟು ಕೊಡುವುದಾಗಿಯೂ ಅವರು ಹೇಳಿದ್ದಾರೆ. ಏಪ್ರಿಲ್ 29 ರಂದು ಬಿಡುಗಡೆಯಾದ ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ಜೊತೆ ಪುತ್ರ ರಾಮ್ ಚರಣ್ ತೇಜ ಕೂಡ ನಟಿಸಿದ್ದರು. ಆದರೂ, ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆಲ್ಲುವುದಕ್ಕೆ ಆಗಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *