CinemaLatestMain PostSouth cinema

`ಆಚಾರ್ಯ’ ಚಿತ್ರದ ಸೋಲಿನಿಂದ ಮೆಗಾಸ್ಟಾರ್ ಚಿರಂಜೀವಿಗೆ ಸಂಕಷ್ಟ

Advertisements

ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್‌ಚರಣ್ ನಟನೆಯ `ಆಚಾರ್ಯ’ ಸಿನಿಮಾ ಗಲ್ಲಾಪೆಟ್ಟಿಗೆ ಸೌಂಡ್ ಮಾಡೋದ್ರಲ್ಲಿ ಸೋತಿತ್ತು. ಈಗ `ಆಚಾರ್ಯ’ ಚಿತ್ರದಿಂದ ನಿರ್ದೇಶಕ ಕೊರಟಾಲ ಶಿವ ಮತ್ತು ಚಿರಂಜೀವಿ ಸಂಕಷ್ಟವೊಂದನ್ನ ಎದುರಿಸುತ್ತಿದ್ದಾರೆ. `ಆಚಾರ್ಯ’ ಚಿತ್ರದ ನಷ್ಟದಿಂದ 25 ಪ್ರದರ್ಶಕರು ಕಛೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಚಿರಂಜೀವಿ ಮತ್ತು ರಾಮ್‌ಚರಣ್ ನಟಿಸಿರುವ `ಆಚಾರ್ಯ’ ಸಿನಿಮಾ ಹೀನಾಯ ಸೋಲನ್ನೇ ಕಂಡಿದೆ. ಚಿತ್ರಕಥೆಗೆ ಸಪ್ಪೆ ಪ್ರತಿಕ್ರಿಯೆ ಸಿಕ್ಕಿತು. ಈ ಚಿತ್ರದಿಂದ ಲಾಭಕ್ಕಿಂತ ನಷ್ಟವೇ ಆಗಿರೋದು ಜಾಸ್ತಿ. ಹಾಗಾಗಿ ಈ ಚಿತ್ರದ ಪ್ರದರ್ಶಕರು ನಿನ್ನೆ ರಾತ್ರಿಯಿಂದ ಕಛೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸದಿದ್ದರೆ ನಟ ಚಿರಂಜೀವಿ ಮನೆ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಕೊನಿಡೆಲಾ ಪ್ರೊಡಕ್ಷನ್ ಮತ್ತು ಮ್ಯಾಟಿನಿ ಎಂಟರ್‌ಟೈನ್‌ಮೆಂಟ್ ಸಾರಥ್ಯದಲ್ಲಿ `ಆಚಾರ್ಯ’ ಚಿತ್ರವನ್ನ 140 ಕೋಟಿಯ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿರೋದು 76 ಕೋಟಿ ಮಾತ್ರ. ಈ ಚಿತ್ರದ ಸೋಲಿನಿಂದ 20ಕ್ಕೂ ಹೆಚ್ಚು ಪ್ರದರ್ಶಕರಿಗೆ ತೊಂದರೆಯಾಗಿದೆ. ಹಾಗಾಗಿ ಚಿತ್ರತಂಡದ ವಿರುದ್ಧವಾಗಿ ಪ್ರದರ್ಶಕರು ನಿಂತಿದ್ದಾರೆ. ಇದನ್ನೂ ಓದಿ:ಕನ್ನಡ, ಕನ್ನಡಿಗರನ್ನೇ ಮರೆತು ಬಿಟ್ಟರಾ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ : ಏನಿದು ಹೊಸ ಆರೋಪ?

ಸದ್ಯ ನಟ ಚಿರಂಜೀವಿ `ಗಾಡ್‌ಫಾದರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ `ಆಚಾರ್ಯ’ ಚಿತ್ರದಿಂದ ನಷ್ಟ ಅನುಭವಿಸುತ್ತಿರುವವರಿಗೆ ಚಿತ್ರತಂಡ ಸಾಥ್‌ ನೀಡುತ್ತಾ ಅಂತಾ ಕಾದು ನೋಡಬೇಕಿದೆ.

Live Tv

Leave a Reply

Your email address will not be published.

Back to top button