ಸಮುದ್ರದ ಮಧ್ಯೆ ಚೀನಾ-ಫಿಲಿಪ್ಪೈನ್ಸ್ ಸೇನೆಗಳ ನಡುವೆ ಜಟಾಪಟಿ

Public TV
1 Min Read
china philippines naval conflict

ಹಾಂಗ್ ಕಾಂಗ್: ದಕ್ಷಿಣ ಚೀನಾ ಸಮುದ್ರಲ್ಲಿ ( South China Sea) ಗಲ್ವಾನ್ ಮಾದರಿ ಗಲಾಟೆ ನಡೆದಿದೆ. ಚೀನಾ ಸೇನೆ ಮತ್ತು ಫಿಲಿಪ್ಪೈನ್ಸ್ (Philippines) ಸೇನೆಗಳ ನಡುವೆ ಭಾರೀ ಫೈಟ್ ನಡೆದಿದೆ.

ಫಿಲಿಪ್ಪೈನ್ಸ್ ಸೇನೆಯ ಹಡಗುಗಳ ಮೇಲೆ ಚೀನಾದ (China) ಕರಾವಳಿ ಪಡೆ ದಾಳಿ ನಡೆಸಿದೆ. ಮಚ್ಚು, ಕೊಡಲಿ, ಸುತ್ತಿಗೆಗಳಿಂದ ಫಿಲಿಪ್ಪೈನ್ಸ್ ಹಡಗುಗಳನ್ನು ಧ್ವಂಸ ಮಾಡಲು ಚೀನಾ ಸೈನಿಕರು ಯತ್ನಿಸಿದ್ದಾರೆ. ಫಿಲಿಪ್ಪೈನ್ಸ್ ಹಡಗಿನಲ್ಲಿದ್ದ ಎಕೆ47 ರೈಫಲ್, ದಿಕ್ಸೂಚಿಯ ಪರಿಕರಗಳನ್ನು ಚೀನಾ ವಶಕ್ಕೆ ಪಡೆದಿದೆ.

CHINA

ಘರ್ಷಣೆಯಲ್ಲಿ ಪಿಲಿಪ್ಪೈನ್ಸ್ ನ ಹಲವು ಸೈನಿಕರು ಗಾಯಗೊಂಡಿದ್ದಾರೆ. ಓರ್ವ ಯೋಧನ ಹೆಬ್ಬೆರಳು ತುಂಡಾಗಿದೆ. ಫಿಲಿಪ್ಪೈನ್ಸ್ ಹಡಗುಗಳು ಕದಲದಂತೆ ಚೀನಾ ಪಡೆಗಳು ಸುತ್ತುವರೆದಿದ್ದವು. ಆದರೂ ಬರಿಗೈಯಲ್ಲೇ ಫಿಲಿಪ್ಪೈನ್ಸ್ ಪಡೆ ತಕ್ಕ ಪ್ರತ್ಯುತ್ತರ ನೀಡಲು ಪ್ರಯತ್ನಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ವೈರಲ್ ಆಗಿದ್ದು, ಫಿಲಿಪ್ಪೈನ್ಸ್ ಆಕ್ರೋಶ ಹೊರಹಾಕಿದೆ.

ಚೀನಾ ಸೇನೆಯನ್ನು ಕಡಲ್ಗಳ್ಳರಿಗೆ ಹೋಲಿಸಿದೆ. ಆದರೆ ಚೀನಾ ಮಾತ್ರ ತಮ್ಮ ಸೇನೆಯ ಕಾರ್ಯವನ್ನು ಸಮರ್ಥಿಸಿದೆ. ಇದನ್ನೂ ಓದಿ; ಹಂಗಾಮಿ ಲೋಕಸಭಾ ಸ್ಪೀಕರ್ ಆಗಿ ಬಿಜೆಪಿಯ ಭರ್ತೃಹರಿ ಮಹತಾಬ್ ನೇಮಕ

Share This Article