ವಾಷಿಂಗ್ಟನ್: ತನ್ನ ವಾಯು ಪ್ರದೇಶದ ಮೇಲೆ ಪತ್ತೆಯಾಗಿದ್ದ ಚೀನಾದ ಬೇಹುಗಾರಿಕಾ ಬಲೂನ್ನ್ನು (Chinese Spy Balloons) ಅಮೆರಿಕ (America) ಹೊಡೆದುರುಳಿಸಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಅಚ್ಚರಿದಾಯಕ ಸುದ್ದಿ ಬಹಿರಂಗವಾಗಿದೆ. ಭಾರತ (India), ಜಪಾನ್ (Japan) ಸೇರಿದಂತೆ ಹಲವು ದೇಶಗಳನ್ನು ಗುರಿಯಾಗಿಸಿಕೊಂಡು ಚೀನಾ ಸ್ಪೈ ಬಲೂನ್ಗಳ ಬೇಹುಗಾರಿಕೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಅಟ್ಲಾಂಟಿಕ್ ಸಾಗರದ ಮೇಲಿನ ವಾಯುಪ್ರದೇಶದಲ್ಲಿ ಮಿಸೈಲ್ ಬಳಸಿ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿತ್ತು. ಈ ಬಗ್ಗೆ ಭಾರತ ಸೇರಿ ಮಿತ್ರರಾಷ್ಟ್ರಗಳಿಗೆ ಅಮೆರಿಕ ವಿವರಿಸಿತ್ತು. ಡೆಪ್ಯೂಟಿ ಸೆಕ್ರೆಟರಿ ಆಫ್ ಸ್ಟೇಟ್ ವೆಂಡಿ ಶೆರ್ಮನ್ ವಾಷಿಂಗ್ಟನ್ನಲ್ಲಿರುವ ಸುಮಾರು 40 ರಾಯಭಾರ ಕಚೇರಿಗಳಿಗೆ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: US Fighter Jet Attack: ಚೀನಾ ಬೇಹುಗಾರಿಕಾ ಬಲೂನ್ ಹೊಡೆದುರುಳಿಸಿದ ಅಮೆರಿಕ
Advertisement
Advertisement
ಚೀನಾದ ದಕ್ಷಿಣ ಕರಾವಳಿಯ ಹೈನಾನ್ ಪ್ರಾಂತ್ಯದಿಂದ ಹಲವಾರು ವರ್ಷಗಳಿಂದ ಬೇಹುಗಾರಿಕಾ ಬಲೂನ್ ಕಾರ್ಯನಿರ್ವಹಿಸುತ್ತಿದೆ. ಜಪಾನ್, ಭಾರತ, ವಿಯೆಟ್ನಾಂ, ತೈವಾನ್, ಫಿಲಿಪಿನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳ ಮಿಲಿಟರಿ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
Advertisement
ವಾಷಿಂಗ್ಟನ್ ಪೋಸ್ಟ್ನ ವರದಿಯು ಹಲವಾರು ಅನಾಮಧೇಯ ರಕ್ಷಣಾ ಮತ್ತು ಗುಪ್ತಚರ ಅಧಿಕಾರಿಗಳ ಸಂದರ್ಶನಗಳನ್ನು ಆಧರಿಸಿದೆ. ಬೇಹುಗಾರಿಕಾ ಬಲೂನ್ ಅನ್ನು ಪಿಎಲ್ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ವಾಯುಪಡೆ ನಿರ್ವಹಿಸುತ್ತಿದೆ. ಐದು ಖಂಡಗಳಲ್ಲಿ ಇವನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್
Advertisement
ಈ ಬಲೂನ್ಗಳು PRC (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಭಾಗವಾಗಿದ್ದು, ಬೇಹುಗಾರಿಕಾ ಕಾರ್ಯಾಚರಣೆ ನಡೆಸಲು ಅಭಿವೃದ್ಧಿಪಡಿಸಲಾಗಿದೆ. ಇದು ಇತರ ದೇಶಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಎಂದು ರಕ್ಷಣಾ ವಲಯದ ಹಿರಿಯ ಅಧಿಕಾರಯೊಬ್ಬರು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k