ವಾಷಿಂಗ್ಟನ್: ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಅಮೆರಿಕದ ನ್ಯೂಯಾರ್ಕ್ (New York) ನಗರ ಸೇರಿದಂತೆ ವಿಶ್ವದಾದ್ಯಂತ ರಹಸ್ಯ ಪೊಲೀಸ್ ಠಾಣೆಗಳನ್ನು (China’s Police Station) ಚೀನಾ ಸ್ಥಾಪಿಸಿದೆ.
ಚೀನೀ ಕಮ್ಯುನಿಸ್ಟ್ ಪಾರ್ಟಿ (CCP) ಅಮೆರಿಕ ಸೇರಿದಂತೆ 30 ವಿವಿಧ ದೇಶಗಳಲ್ಲಿ ಕನಿಷ್ಠ 54 ‘ಸಾಗರೋತ್ತರ ಪೊಲೀಸ್ ಸೇವಾ ಕೇಂದ್ರʼಗಳನ್ನು ಹೊಂದಿದೆ ಎಂದು ಮಾನವ ಹಕ್ಕುಗಳ ವಾಚ್‌ಡಾಗ್ ವರದಿ ಬಹಿರಂಗಪಡಿಸಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಬರ್ತ್‌ಡೆ ಪಾರ್ಟಿ – ಭಾರತ ಮೂಲದ ಯುವಕ ಕೊಲೆ
Advertisement
Advertisement
ನ್ಯಾಯಾರ್ಕ್‌ನಲ್ಲಿರುವ ಚೈನಾಟೌನ್ ಮತ್ತು ಲೋವರ್ ಈಸ್ಟ್ ಸೈಡ್ ನಡುವಿನ ಪೂರ್ವ ಬ್ರಾಡ್ವೇನಲ್ಲಿ ಫೆಬ್ರವರಿ 15 ರಂದು ಚೀನಿಯರ ರಹಸ್ಯ ಪೊಲೀಸ್ ಠಾಣೆ ತೆರೆಯಲಾಗಿದೆ. ಪೊಲೀಸ್ ಠಾಣೆ ಯಾವಾಗಲೂ ಮುಚ್ಚಿರುತ್ತದೆ. ಅಪರೂಪಕ್ಕೆ ಒಮ್ಮೆ ಅದನ್ನು ತೆಗೆಯಲಾಗುತ್ತದೆ ಎಂದು ಸ್ಥಳೀಯರು ಮಾತಿಹಿ ನೀಡಿದ್ದಾರೆ.
Advertisement
ಚೀನಿ ಪ್ರಜೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಠಾಣೆ ಕಾರ್ಯನಿರ್ವಹಿಸಲಿದೆ. ಪ್ರಪಂಚದಾದ್ಯಂತ ತೆರೆದಿರುವ ಠಾಣೆಗಳಲ್ಲೂ ಇದೇ ನೀತಿ ಅನುಸರಿಸಲಾಗುತ್ತಿದೆ. ಚೀನಾವು ವಿದೇಶಗಳಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸುತ್ತಿರುವುದು ಆಘಾತಕಾರಿ ವಿಷಯ ಎಂದು ಹ್ಯೂಮನ್ ರೈಟ್ಸ್ ವಾಚ್‌ಡಾಗ್ ಸೇಫ್‌ಗಾರ್ಡ್ ಡಿಫೆಂಡರ್ಸ್‌ನ ಪ್ರಚಾರ ವ್ಯವಸ್ಥಾಪಕರಾದ ಲಾರಾ ಹರ್ತ್ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಪುಟಿನ್ ಅಣ್ವಸ್ತ್ರ ಬಳಸಬಹುದು: ಬೈಡನ್
Advertisement
ಪ್ರಪಂಚದ ಅನೇಕ ಕಡೆಗಳಲ್ಲಿ ಚೀನಾದ ರಹಸ್ಯ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಸಾಮಾನ್ಯವಾಗಿ ಚೈನೀಸ್ ರೆಸ್ಟೋರೆಂಟ್‌ಗಳು ಅಥವಾ ಅನುಕೂಲಕರ ಅಂಗಡಿಗಳಲ್ಲಿ ಠಾಣೆಗಳನ್ನು ಹೊಂದಲಾಗಿದೆ.