Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Explainer

PublicTV Explainer: 60 ವರ್ಷಗಳಲ್ಲೇ ಮೊದಲ ಬಾರಿಗೆ ಕುಸಿದ ಚೀನಾ ಜನಸಂಖ್ಯೆ – ಇದು ಹೇಗಾಯ್ತು ಗೊತ್ತಾ?

Public TV
Last updated: February 18, 2023 4:43 pm
Public TV
Share
4 Min Read
China Child Policy
SHARE

– ಕುಟುಂಬಕ್ಕೆ ಒಂದೇ ಮಗು ನೀತಿ ಎಫೆಕ್ಟ್‌
– ಪ್ರೋತ್ಸಾಹದ ಹೊರತಾಗಿಯೂ ಕಡಿಮೆ ಜನನ ಪ್ರಮಾಣ ಮುಂದುವರಿಕೆ
– ಭಾರತವು 2023ಕ್ಕೆ ಅತಿ ಹೆಚ್ಚು ಜನಸಂಖ್ಯೆ ಹೊಂದುತ್ತೆ

60 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಚೀನಾದ (China) ಜನಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ಬೆಳವಣಿಗೆ ನಾನಾ ನೆಲೆಗಟ್ಟಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಂದೆ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ ಯಾವುದು ಆಗಲಿದೆ ಎಂಬ ಪ್ರಶ್ನೆ ಮೂಡಿದ್ದು, ವಿಶ್ಲೇಷಣೆಗಳ ಪ್ರಕಾರ ಆ ಸ್ಥಾನವನ್ನು ಭಾರತ ಅಲಂಕರಿಸಲಿದೆ. ಈಗ ಇಡೀ ಜಗತ್ತಿನ ಕಣ್ಣು ಭಾರತದ ಮೇಲೆ ನೆಟ್ಟಿದೆ.

Contents
– ಕುಟುಂಬಕ್ಕೆ ಒಂದೇ ಮಗು ನೀತಿ ಎಫೆಕ್ಟ್‌ – ಪ್ರೋತ್ಸಾಹದ ಹೊರತಾಗಿಯೂ ಕಡಿಮೆ ಜನನ ಪ್ರಮಾಣ ಮುಂದುವರಿಕೆ – ಭಾರತವು 2023ಕ್ಕೆ ಅತಿ ಹೆಚ್ಚು ಜನಸಂಖ್ಯೆ ಹೊಂದುತ್ತೆLive Tv

ಚೀನಾದಲ್ಲಿ (China Population) ಎಷ್ಟು ಪ್ರಮಾಣದಲ್ಲಿ ಜನಸಂಖ್ಯೆ ಕುಸಿದಿದೆ. ಜನಸಂಖ್ಯೆ ದಿಢೀರ್‌ ಕುಸಿತಕ್ಕೆ ಕಾರಣವೇನು? ಇದರಿಂದ ರಾಷ್ಟ್ರದ ಆರ್ಥಿಕತೆ ಹಾಗೂ ಸಾರ್ವಜನಿಕ ಆದಾಯದ ಮೇಲೆ ಬೀರಬಹುದಾದ ಪರಿಣಾಮಗಳೇನು? ವಿಶ್ಲೇಷಕರು ಏನು ಹೇಳ್ತಾರೆ? ಬನ್ನಿ ವಿವರವಾಗಿ ತಿಳಿಯೋಣ. ಇದನ್ನೂ ಓದಿ: 2023ರಲ್ಲಿ ಜನಸಂಖ್ಯೆಯಲ್ಲಿ ಚೀನಾ ಮೀರಿಸುತ್ತೆ ಭಾರತ – ಇದು ವರದಾನವೋ.. ತಲೆನೋವೊ?

China

ಕಳೆದ ವರ್ಷ ಚೀನಾ ಜನಸಂಖ್ಯೆಯಲ್ಲಿ ಸುಮಾರು 8,50,000 ಇಳಿಕೆಯಾಗಿದೆ. ಆರು ದಶಕಗಳಲ್ಲಿ ಮೊದಲ ಬಾರಿಗೆ ಈ ಕುಸಿತ ಕಂಡಿದ್ದು, 2022ರ ಅಂತ್ಯದ ವೇಳೆ ಚೀನಾ ಜನಸಂಖ್ಯೆ 1.41 ಶತಕೋಟಿಗೆ (141 ಕೋಟಿ) ಆಗಿತ್ತು ಎಂದು ದೇಶದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಹೇಳಿದೆ. 2022 ರಲ್ಲಿ ಚೀನಾದಲ್ಲಿ 9.56 ಮಿಲಿಯನ್ (95 ಲಕ್ಷ) ಮಕ್ಕಳು ಜನಿಸಿದರೆ, 10.41 ಮಿಲಿಯನ್ (1.41 ಕೋಟಿ) ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಚೀನಾದ ವಿನಾಶಕಾರಿ ಕೃಷಿ ನೀತಿ
1960ರಲ್ಲಿ ಚೀನಾ ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಕ್ಷಾಮ ಉಂಟಾಗಿ ಜನಸಂಖ್ಯೆ ಕುಸಿದಿತ್ತು. ಗ್ರೇಟ್ ಲೀಪ್ ಫಾರ್ವರ್ಡ್ ಎಂದು ಕರೆಯಲ್ಪಡುವ ಮಾವೋ ಝೆಡಾಂಗ್ ಅವರ ವಿನಾಶಕಾರಿ ಕೃಷಿ ನೀತಿಯಿಂದ ಉಂಟಾದ ಅತ್ಯಂತ ಭೀಕರ ಕ್ಷಾಮದಿಂದ ಚೀನಾದ ಜನಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಅದಾದ ಬಳಿಕ ಈಗ ಮತ್ತೆ ಜನಸಂಖ್ಯೆಯಲ್ಲಿ ಕುಸಿತ ಕಂಡಿದೆ. ಇದನ್ನೂ ಓದಿ: 6 ದಶಕಗಳಲ್ಲೇ ಮೊದಲ ಬಾರಿ ಚೀನಾ ಜನಸಂಖ್ಯೆ ಇಳಿಕೆ

china onechild.jpeg

ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋದ ಮುಖ್ಯಸ್ಥ ಕಾಂಗ್ ಯಿ, “ಒಟ್ಟಾರೆ ಕಾರ್ಮಿಕ ಪೂರೈಕೆಯು ಬೇಡಿಕೆಗಿಂತ ಹೆಚ್ಚಿದೆ. ಹೀಗಾಗಿ ಜನರು ಜನಸಂಖ್ಯೆಯ ಕುಸಿತದ ಬಗ್ಗೆ ಚಿಂತಿಸಬಾರದು” ಎಂದು ತಿಳಿಸಿದ್ದಾರೆ. ಕಳೆದ ವರ್ಷ ಚೀನಾದ ಜನನ ಪ್ರಮಾಣವು 1,000 ಜನರಿಗೆ 6.77 ಜನನಗಳಾಗಿದ್ದು, 2021 ರಲ್ಲಿ 7.52 ಜನನಗಳಾಗಿತ್ತು.

ಕುಟುಂಬಕ್ಕೆ ಒಂದೇ ಮಗು ನೀತಿ ಎಫೆಕ್ಟ್‌
ಚೀನಾದಲ್ಲಿ ಜನಸಂಖ್ಯೆ ಕುಸಿತಕ್ಕೆ ಒಂದು ಕಾರಣವಿದೆ. 1980 ಮತ್ತು 2015 ರ ನಡುವೆ ಹೇರಲಾದ ಒಂದು ಮಗುವಿನ ನೀತಿ. ದಂಪತಿ ಹೊಂದಬಹುದಾದ ಮಕ್ಕಳ ಸಂಖ್ಯೆಯನ್ನು ಒಂದಕ್ಕೆ ಸೀಮಿತಗೊಳಿಸಲಾಗಿತ್ತು. ಈ ನೀತಿಯು ಸುಮಾರು 400 ಮಿಲಿಯನ್ (40 ಕೋಟಿ) ಮಕ್ಕಳ ಜನನ ನಿಯಂತ್ರಣಕ್ಕೆ ಸಹಾಯ ಮಾಡಿತ್ತು ಎಂದು ಚೀನಾ ಹೇಳಿದೆ. ಆದರೆ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿನ ಅನುಪಾತವು ಕಡಿಮೆಯಾಗಲು ಪ್ರಾರಂಭಿಸಿದಾಗ ನೀತಿಯನ್ನು ತೆಗೆದುಹಾಕಲು ದೇಶ ನಿರ್ಧರಿಸಿತು.

china flag

ಪ್ರೋತ್ಸಾಹದ ಹೊರತಾಗಿಯೂ ಕಡಿಮೆ ಜನನ ಪ್ರಮಾಣ ಮುಂದುವರಿಕೆ
ಜನಸಂಖ್ಯಾ ನಿಯಂತ್ರಣಕ್ಕೆ ಚೀನಾ ಹೊರಡಿಸಿದ ನೀತಿಯಿಂದ ದುಡಿಯುವ ವರ್ಗವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸಿತು. ಆಗ ಹೆಚ್ಚಿನ ಮಕ್ಕಳನ್ನು ಹೊಂದುವವರಿಗೆ ಮಕ್ಕಳ ಶಿಕ್ಷಣದ ವೆಚ್ಚ, ಜೀವನ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಚೀನಾ ಆಫರ್‌ ನೀಡಿತು. 2016 ರಿಂದ ಎಲ್ಲಾ ವಿವಾಹಿತ ದಂಪತಿಗಳು ಎರಡನೇ ಮಗುವನ್ನು ಹೊಂದಲು ಅನುಮತಿಸಿತ್ತು. 2021 ರಲ್ಲಿ, ಬೀಜಿಂಗ್ ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಮತ್ತು ಯುರೋಪಿನ ಇತರ ದೇಶಗಳು ಸಹ ಇದೇ ರೀತಿಯ ನಡೆಯನ್ನು ಅನುಸರಿಸಿದ್ದವು. ಇದನ್ನೂ ಓದಿ: Nepal Plane Crash – ಮೃತರ ಸಂಖ್ಯೆ 71ಕ್ಕೆ ಏರಿಕೆ

ಚಿಕ್ಕ ಮಕ್ಕಳನ್ನು ಪೋಷಿಸುವ ಜನರಿಗೆ ಕೆಲಸದ ಸಮಯದಲ್ಲಿ ಮಿತಿ, ಮನೆಯಿಂದ ಕೆಲಸ ಮಾಡುವ ಆಯ್ಕೆ ಮತ್ತು ವಿತ್ತೀಯ ಪ್ರೋತ್ಸಾಹದಂತಹ ಕ್ರಮಗಳನ್ನು ಸಹ ಚೀನಾದಲ್ಲಿ ಘೋಷಿಸಲಾಗಿದೆ. ದಕ್ಷಿಣ ಚೀನಾದ ನಗರವಾದ ಶೆನ್‌ಝೆನ್‌ನಲ್ಲಿ, 3ನೇ ಮಗುವನ್ನು ಹೊಂದಿರುವ ದಂಪತಿಗೆ ಅಥವಾ ಮಗುವಿಗೆ ಮೂರು ವರ್ಷ ತುಂಬುವವರೆಗೆ ವಾರ್ಷಿಕ 6,000 ಯುವಾನ್ (890 ಡಾಲರ್‌ ಅಂದರೆ 72,587 ರೂಪಾಯಿ) ಕ್ಕಿಂತ ಹೆಚ್ಚಿನ ಭತ್ಯೆಯನ್ನು ನೀಡುತ್ತಿದೆ.

population 2
ಸಾಂದರ್ಭಿಕ ಚಿತ್ರ

ಭಾರತವು 2023ಕ್ಕೆ ಅತಿ ಹೆಚ್ಚು ಜನಸಂಖ್ಯೆ ಹೊಂದುತ್ತೆ
20ನೇ ಶತಮಾನದಲ್ಲಿ ಭಾರತ ಮತ್ತು ಚೀನಾ ಎರಡೂ, ಜನಸಂಖ್ಯೆಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಸೂಚಕಗಳ ವಿಷಯದಲ್ಲಿ ಒಂದೇ ರೀತಿಯದ್ದಾಗಿದ್ದವು. ಹೆಚ್ಚಿದ ಶಿಕ್ಷಣ ಮಟ್ಟಗಳು, ಸಾರ್ವಜನಿಕ ಆರೋಗ್ಯ ಮತ್ತು ಲಸಿಕೆ ಕಾರ್ಯಕ್ರಮಗಳು, ಆಹಾರ ಮತ್ತು ವೈದ್ಯಕೀಯ ಆರೈಕೆ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಮರಣವು ಕಡಿಮೆಯಾಗುತ್ತದೆ. ಎರಡೂ ದೇಶಗಳಲ್ಲಿ ಇದು ಸಾಧ್ಯವಾಯಿತು. ಇದು ಅನೇಕ ದಶಕಗಳಿಂದ ಜನಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ಮಹಿಳೆ 118 ವರ್ಷದ ಲುಸಿಲ್ ರಾಂಡನ್ ನಿಧನ

ಭಾರತದಕ್ಕೆ ದುಡಿಯುವ ವಯಸ್ಸಿನ ಜನಸಂಖ್ಯೆಯು ಹೆಚ್ಚು ಮುಖ್ಯವಾಗಿದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಇದರ ಪಾಲು 2007ರಲ್ಲಿ 50% ದಾಟಿತ್ತು. ಇದು 2030ರ ದಶಕದ ಮಧ್ಯಭಾಗದಲ್ಲಿ 57% ಕ್ಕೆ ತಲುಪಲಿದೆ. ಆದ್ದರಿಂದ ಭಾರತವು 2040 ರ ದಶಕದಲ್ಲಿ ಉತ್ತಮ ಅವಕಾಶವನ್ನು ಹೊಂದಿದೆ. ಜನಸಂಖ್ಯೆ ಹೆಚ್ಚಿದರೂ, ಯುವ ಸಮುದಾಯಕ್ಕೆ ಸೂಕ್ತ ಉದ್ಯೋಗಾವಕಾಶಗಳ ಸೃಷ್ಟಿಯ ಮೇಲೆ ಇದು ಅವಲಂಬಿತವಾಗಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:chinachina populationindiaಚೀನಾಜನಸಂಖ್ಯೆಭಾರತ
Share This Article
Facebook Whatsapp Whatsapp Telegram

Cinema Updates

Darshan Devil 3
ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ
Cinema Latest Main Post Sandalwood
Dalapathi Vijay
ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ
Cinema Latest South cinema Top Stories
shah rukh khan small
ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ
Bollywood Cinema Latest Main Post
fish venkat
ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ
Cinema Latest South cinema Top Stories
Akshay Kumar
ರಿಯಲ್ ಹೀರೋ ಅಕ್ಷಯ್‌ಕುಮಾರ್ ಮಾಡಿದ ಕಾರ್ಯ ಎಲ್ಲರಿಗೂ ಮಾದರಿ
Bollywood Cinema Latest Top Stories

You Might Also Like

DCC Bank
Belgaum

ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ – ಜಾರಕಿಹೊಳಿ ಬ್ರದರ್ಸ್‌ ಸೋಲಿಸಲು ಪಕ್ಷಾತೀತವಾಗಿ ಒಂದಾದ ಲಿಂಗಾಯತ ನಾಯಕರು

Public TV
By Public TV
19 minutes ago
Basavaraj Dadesugur
Crime

ಕೊಪ್ಪಳ | ಮಾಜಿ ಶಾಸಕ ದಡೇಸೂಗುರು ಕಾರಿಗೆ ಕಲ್ಲೆಸೆದ ಕಿಡಿಗೇಡಿಗಳು

Public TV
By Public TV
21 minutes ago
Boat
Latest

ವಿಯೆಟ್ನಾಂನಲ್ಲಿ ಪ್ರವಾಸಿ ದೋಣಿ ಮಗುಚಿ 34 ಮಂದಿ ಸಾವು – ಹಲವರು ಮಿಸ್ಸಿಂಗ್‌

Public TV
By Public TV
8 hours ago
GST 6
Bengaluru City

ತೆರಿಗೆ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ರೆ ಕೂಡಲೇ ಕರೆ ಮಾಡಿ – ಸಹಾಯವಾಣಿ ಬಿಡುಗಡೆ

Public TV
By Public TV
9 hours ago
ISIS Uttar Pradesh Police
Latest

ಐಸಿಸ್‌ ಮಾದರಿಯಲ್ಲಿ ಧಾರ್ಮಿಕ ಮತಾಂತರ ದಂಧೆ – 6 ರಾಜ್ಯಗಳಲ್ಲಿ 10 ಮಂದಿ ಅರೆಸ್ಟ್‌, ಬೃಹತ್‌ ಜಾಲ ಭೇದಿಸಿದ UP ಪೊಲೀಸ್‌

Public TV
By Public TV
9 hours ago
BY Vijayendra
Bengaluru City

ಬಿಹಾರ ಎಲೆಕ್ಷನ್‌ಗೆ ಕರ್ನಾಟಕದಲ್ಲಿ ವಸೂಲಿ – ಜಿಎಸ್‌ಟಿ ನೋಟಿಸ್‌ಗೆ ಕೇಸರಿ ಬಿಗ್ ಟ್ವಿಸ್ಟ್

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?