ಬೀಜಿಂಗ್: ಡೇಟಿಂಗ್ (Dating) ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿದ್ದು, ಮದುವೆಗೂ (Marriage) ಮುನ್ನ ಜೀವನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಡೇಟಿಂಗ್ ಉತ್ತಮ ಆಯ್ಕೆ ಎಂದು ಬಹುತೇಕ ಮಂದಿ ಭಾವಿಸಿದ್ದಾರೆ. ಹೀಗಾಗಿ ದಂಪತಿಯಾಗುವುದಕ್ಕೂ ಮುನ್ನವೇ ಹೊರಗೆ ಹೋಗಬಹುದು ಮತ್ತು ಒಟ್ಟಿಗೆ ಸಮಯ ಕಳೆಯಬಹುದಾಗಿದೆ.
ಇದೀಗ ಚೀನಾದಲ್ಲಿ (China) ಹೊಸ ಡೇಟಿಂಗ್ ಸಂಸ್ಕೃತಿ ಆರಂಭವಾಗಿದೆ. ದಿನೇದಿನ ಖ್ಯಾತಿ ಪಡೆದುಕೊಳ್ಳುತ್ತಿದೆ. ಮೊದಲ ಭೇಟಿಯಲ್ಲಿ ಅಪರಿಚಿತರ ಜೊತೆ ಕಿಸ್ ಮಾಡುವ ಮೂಲಕ ಪರಿಚಯಿಸಿಕೊಳ್ಳುವುದು ಈ ಡೇಟಿಂಗ್‌ನ ವಿಧಾನವಾಗಿದೆ. ಇದಕ್ಕೆ ಚೀನಾದಲ್ಲಿ ‘ಸುಯಿ ಯು’ ಎಂದು ಹೆಸರಿಸಲಾಗಿದೆ. ಇಲ್ಲಿ ಮೊದಲು ಚುಂಬನಕ್ಕಿಂತ ಹೆಚ್ಚೇನೂ ಇಲ್ಲ. ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂ ಆದೇಶ
ಆದಾಗ್ಯೂ ಬಹುತೇಕ ಮಂದಿ ಈ ವಿಧಾನವನ್ನು ವಿರೋಧಿಸುತ್ತಿದ್ದಾರೆ. ಅಪರಿಚಿತರನ್ನು ಚುಂಬಿಸುವ ಮೂಲಕ ಬ್ಯಾಕ್ಟೀರಿಯಾ (Bacteria) ಮತ್ತು ವೈರಸ್‌ಗಳಿಂದ (Virus) ರೋಗಗಳು ಹರಡಲು ಕಾರಣವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್ ನಿಷೇಧ – ಪ್ರತಿಭಟನೆಗೆ ಪರೀಕ್ಷೆಯಿಂದಲೇ ಹೊರನಡೆದ ಅಫ್ಘನ್ ಯುವಕರು