ಕಾಬೂಲ್: ವಿಶ್ವವಿದ್ಯಾಲಯಗಳಲ್ಲಿ (University) ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುವುದನ್ನು ನಿಷೇಧಿಸಿರುವ ತಾಲಿಬಾನ್ (Taliban) ನಡೆಯನ್ನು ಪ್ರತಿಭಟಿಸಲು ಅಫ್ಘಾನಿಸ್ತಾನದ (Afghanistan) ಯುವಕರು ಒಗ್ಗಟ್ಟಾಗಿ ಪರೀಕ್ಷೆಯಿಂದಲೇ (Exam) ಹೊರನಡೆದಿದ್ದಾರೆ.
ನಂಗರ್‌ಹಾರ್ ಹಾಗೂ ಕಂದಹಾರ್‌ನಲ್ಲಿನ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು (Students) ಪರೀಕ್ಷೆಯಿಂದ ಹೊರನಡೆದಿದ್ದಾರೆ. ವಿದ್ಯಾರ್ಥಿಗಳು ತಾಲಿಬಾನ್ ಆದೇಶದ ವಿರುದ್ಧವಾಗಿ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.
Advertisement
Advertisement
ತಾಲಿಬಾನ್‌ನ ಉನ್ನತ ಶಿಕ್ಷಣ ಸಚಿವಾಲಯ ಮಹಿಳಾ ಹಕ್ಕುಗಳು ಮತ್ತು ಸ್ವಾತಂತ್ರ‍್ಯಗಳ ಮೇಲೆ ಇತ್ತೀಚೆಗೆ ದಬ್ಬಾಳಿಕೆಯನ್ನು ಹೆಚ್ಚಿಸುತ್ತಿದ್ದು, ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣದ ಮೇಲೆ ನಿಷೇಧವನ್ನು ಹೇರಿದೆ. ಇದು ಅಂತಾರಾಷ್ಟ್ರೀಯವಾಗಿ ಭಾರೀ ಟೀಕೆಗೆ ಕಾರಣವಾಗಿದೆ. ಇದನ್ನೂ ಓದಿ: ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಅಬಯಾ ಬ್ಯಾನ್
Advertisement
ಕಳೆದ ವರ್ಷ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ಕ್ರಮಗಳನ್ನು ವ್ಯಾಪಕವಾಗಿ ಜಾರಿಗೆ ತಂದಿದೆ. ಪ್ರಾರಂಭದಲ್ಲಿ ಮಧ್ಯಮ ಹಾಗೂ ಪ್ರೌಢಶಾಲೆಯಿಂದ ಹುಡುಗಿಯರನ್ನು ನಿಷೇಧಿಸಲಾಗಿತ್ತು. ಬಳಿಕ ಉದ್ಯೋಗದಿಂದ ಮಹಿಳೆಯರನ್ನು ನಿರ್ಬಂಧಿಸಿಸಲಾಗಿತ್ತು
Advertisement
ಸಾರ್ವಜನಿಕವಾಗಿ ಮಹಿಳೆಯರು ಅಡಿಯಿಂದ ಮುಡಿ ವರೆಗೆ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತೆ ಬಟ್ಟೆ ಧರಿಸಲು ಆದೇಶಿಸಿತ್ತು. ಬಳಿಕ ಮಹಿಳೆಯರನ್ನು ಪಾರ್ಕ್ ಹಾಗೂ ಜಿಮ್‌ಗಳಿಂದ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲದೇ ಮಹಿಳೆಯರು ತಮ್ಮೊಂದಿಗೆ ಪುರುಷ ಸಂಬಂಧಿ ಇಲ್ಲದೇ ಪ್ರಯಾಣಿಸುವಂತಿಲ್ಲ ಎಂದು ಆದೇಶ ಹೊರಡಿಸಿತ್ತು. ಇದನ್ನೂ ಓದಿ: ಲೈಂಗಿಕತೆಯ ಒಪ್ಪಿಗೆ ವಯಸ್ಸನ್ನು ಕಡಿಮೆ ಮಾಡಲ್ಲ: ಕೇಂದ್ರ ಸರ್ಕಾರ