ವಾಷಿಂಗ್ಟನ್: ಭಾರತ-ಪಾಕಿಸ್ತಾನ ಯುದ್ಧವನ್ನು (India-Pakistan War) ಚೀನಾ (China) ತನ್ನ ಯುದ್ಧೋಪಕರಣಗಳ ಪರೀಕ್ಷೆಗೆ ಬಳಸಿತ್ತು ಎಂದು ಅಮೆರಿಕದ ಸಂಸತ್ ಸಮಿತಿ (US commission) ಆರೋಪಿಸಿದೆ.
ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ನಡೆಸಿದ್ದ ಆಪರೇಷನ್ ಸಿಂಧೂರದ ವೇಳೆ ಪಾಕಿಸ್ತಾನದ ವಿರುದ್ಧ ಭಾರತ ಸೇನಾ ದಾಳಿ ನಡೆಸಿತ್ತು. ಈ ವೇಳೆ ಪಾಕಿಸ್ತಾನಕ್ಕೆ ನೆರವು ನೀಡುವ ನೆಪದಲ್ಲಿ ಚೀನಾ ತನ್ನ ಶಸ್ತ್ರ್ರಾಸ್ತ್ರಗಳ ಪರೀಕ್ಷೆ ನಡೆಸಿತ್ತು ಎಂದು ಅಮೆರಿಕ ಆರೋಪಿಸಿದೆ. ಅಮೆರಿಕದ ಸಂಸತ್ ಸಮಿತಿ ಈ ಆರೋಪ ಮಾಡಿದೆ. ಇದನ್ನೂ ಓದಿ: Telangana | ಪೌರಕಾರ್ಮಿಕನ ಶವದೊಂದಿಗೆ ಡಿಸಿ ಕಚೇರಿಯಲ್ಲಿ ಪ್ರತಿಭಟನೆ – ಪೊಲೀಸರಿಂದ ಲಾಠಿ ಚಾರ್ಜ್
ಚೀನಾದ ಆಧುನಿಕ ಯುದ್ಧೋಪಕರಣಗಳಾದ ಹೆಚ್ಕ್ಯೂ-9 ವಾಯು ರಕ್ಷಣಾ ವ್ಯವಸ್ಥೆ, ಪಿಎಲ್-15 ವಾಯು-ಟು-ಏರ್ ಕ್ಷಿಪಣಿಗಳು ಮತ್ತು ಜೆ-10 ಫೈಟರ್ ಜೆಟ್ಗಳನ್ನು ಯುದ್ಧದಲ್ಲಿ ನಿಯೋಜಿಸಲಾಗಿತ್ತು. ಬಳಿಕ, 2025ರ ಜೂನ್ನಲ್ಲಿ ಪಾಕಿಸ್ತಾನಕ್ಕೆ ಐದನೇ ತಲೆಮಾರಿನ ಫೈಟರ್ ಜೆಟ್ಗಳಾದ ಜೆ-35, ಕೆಜೆ-500 ವಿಮಾನಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಮಾರಾಟ ಮಾಡಲು ಮುಂದಾಗಿತ್ತು ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಜೊಹಾನ್ಸ್ಬರ್ಗ್ G20 ಶೃಂಗದಲ್ಲಿ ಮೋದಿ ಭಾಗಿ – ವಿಶ್ವದ ಅಭಿವೃದ್ಧಿಗೆ 4 ಸೂತ್ರ ಕೊಟ್ಟ ʻನಮೋʼ!
ಪಾಕಿಸ್ತಾನಕ್ಕೆ ನೆರವು ನೀಡುವ ನೆಪದಲ್ಲಿ ಚೀನಾ ತನ್ನ ಶಸ್ತ್ರ್ರಾಸ್ತ್ರಗಳ ಪರೀಕ್ಷೆ ನಡೆಸಿತ್ತು. ಅವಕಾಶವಾದಿಯಾಗಿ ವರ್ತಿಸಿತ್ತು ಎಂದು ಸಮಿತಿ ಹೇಳಿದೆ. ಭಾರತದ ಗಡಿಯಲ್ಲಿ ಪಾಕಿಸ್ತಾನ ದಾಳಿ ಮಾಡಿದ್ದಾಗ ಚೀನಾದ ಶಸ್ತ್ರಾಸ್ತ್ರಗಳು ಸಿಕ್ಕಿದ್ದವು ಎಂದು ಈ ಹಿಂದೆಯೇ ಭಾರತೀಯ ಸೇನೆಯೂ ಹೇಳಿತ್ತು. ಅಲ್ಲದೇ ಯುದ್ಧದ ವೇಳೆ ಭಾರತದ ನಡಾವಳಿ ಮೇಲೆ ನಿಗಾ ಇಟ್ಟು ನೇರ ಮಾಹಿತಿಯನ್ನೂ ಪಾಕಿಸ್ತಾನಕ್ಕೆ ಚೀನಾ ರವಾನಿಸುತ್ತಿತ್ತು. ಇದನ್ನೂ ಓದಿ: ತಿರುಪತಿಯಲ್ಲಿ 5 ವರ್ಷದಲ್ಲಿ 20 ಕೋಟಿ ಕಲಬೆರಕೆ ಲಡ್ಡು ವಿತರಣೆ
