ತೈಪೆ: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‍ಗೆ ಭೇಟಿ ನೀಡಿದ ಬಳಿಕ ಕೆರಳಿರುವ ಚೀನಾ ತೈವಾನ್‍ನ ಸುತ್ತಮುತ್ತಲು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ.
ನ್ಯಾನ್ಸಿ ಪೆಲೋಸಿ ಭೇಟಿ ಬೆನ್ನಲ್ಲೇ ತೈವಾನ್ ವಿರುದ್ಧ ಚೀನಾ ಪ್ರತೀಕಾರಕ್ಕೆ ಮುಂದಾಗಿದೆ. ತೈವಾನ್‍ನ ಸುತ್ತಮುತ್ತಲಿನ 6 ಪ್ರದೇಶಗಳಲ್ಲಿ ಸೇನಾ ಡ್ರಿಲ್ ಮಾಡಿದ್ದು, ಭಾನುವಾರದವರೆಗೂ ಮುಂದುವರಿಯುತ್ತದೆ ಎಂದು ಚೀನಾದದ ಗ್ಲೋಬಲ್ ಟೈಮ್ಸ್ ಹೇಳಿದೆ.
Advertisement
PLA has launched multiple DF ballistic #missiles at our NE and SW waters since 13:56. #ROCArmedForces have monitored the situation with various means, while our defense systems have been activated. We condemn such irrational action that has jeopardized regional peace. pic.twitter.com/9JAFVBJIUO
— 國防部 Ministry of National Defense, R.O.C. ???????? (@MoNDefense) August 4, 2022
Advertisement
ಚೀನಾದ ಈಸ್ಟನ್ ಥಿಯೇಟರ್ ಕಮಾಂಡ್‍ನ ವಕ್ತಾರ ಈ ಬಗ್ಗೆ ಮಾಹಿತಿ ನೀಡಿದ್ದು, ರಾಕೆಟ್ ಪಡೆಗಳು ಅನೇಕ ಸ್ಥಳಗಳಿಂದ ಹಲವಾರು ಕ್ಷಿಪಣಿಗಳನ್ನು ತೈವಾನ್‍ನ ಪೂರ್ವ ಕರಾವಳಿಯ ನೀರಿನಲ್ಲಿ ಉಡಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ತೈವಾನ್‍ನ ರಕ್ಷಣಾ ಸಚಿವಾಲಯವು ಕ್ಷಿಪಣಿಗಳು ಉಡಾವಣೆಗೊಂಡಿರುವುದನ್ನು ದೃಢಪಡಿಸಿದೆ. ಅವುಗಳನ್ನು ಡಾಂಗ್‍ಫೆಂಗ್-ಕ್ಲಾಸ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಎಂದು ಗುರುತಿಸಿದೆ. ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:56 ಗಂಟೆಗೆ ಆ ಕ್ಷಿಪಣಿಯನ್ನು ತೈವಾನ್‍ನ ನೀರಿನಲ್ಲಿ ಹಾರಿಸಲಾಗಿದೆ ಎಂದು ಹೇಳಿದೆ.
ಈಗಾಗಲೇ ಚೀನಾದ 27 ಯುದ್ಧ ವಿಮಾನಗಳು ತೈವಾನ್‍ನ ವಾಯುರಕ್ಷಣಾ ಪ್ರದೇಶವನ್ನು ಪ್ರವೇಶಿಸಿವೆ. ಪೀಪಲ್ಸ್ ಲಿಬರೇಷನ್ ಆರ್ಮಿಯ 27 ಯುದ್ಧ ವಿಮಾನಗಳು ನಮ್ಮ ಪ್ರದೇಶವನ್ನು ಸುತ್ತುವರಿದಿರುವ ಬಗ್ಗೆ ತೈವಾನ್ ರಕ್ಷಣಾ ಇಲಾಖೆ ದೃಢಪಡಿಸಿತ್ತು. ಇದನ್ನೂ ಓದಿ: ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!
ಅಷ್ಟೇ ಅಲ್ಲದೇ ಚೀನಾ ಬೆದರಿಕೆಗೆ ತೈವಾನ್ ಅಧ್ಯಕ್ಷೆ ಸಾಯ್ ಯಿಂಗ್ ವೆನ್ ತಿರುಗೇಟು ಕೊಟ್ಟಿದ್ದರು. ದೇಶದ 2.3 ಕೋಟಿ ಜನರು ಹೇಡಿಗಳಲ್ಲ. ಚೀನಾದ ಮಿಲಿಟರಿ ಬೆದರಿಕೆಗೆ ನಾವು ಹೆದರುವುದಿಲ್ಲ. ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳುತ್ತೇವೆ ಎಂದಿದ್ದರು. ಇದನ್ನೂ ಓದಿ: ಅಮೆರಿಕ ಸ್ಪೀಕರ್ ಭೇಟಿ ಬೆನ್ನಲ್ಲೇ ತೈವಾನ್ ವಾಯು ರಕ್ಷಣಾ ವಲಯಕ್ಕೆ ಚೀನಾ ಯುದ್ಧ ವಿಮಾನಗಳು ಎಂಟ್ರಿ