InternationalLatestMain Post

ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

Advertisements

ತೈಪೆ: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಹಿನ್ನೆಲೆ ಕೆರಳಿರುವ ಚೀನಾ ತನ್ನ ಸೇನೆಗೆ ಯುದ್ಧಕ್ಕೆ ಸಜ್ಜಾಗಲು ತರಬೇತಿ ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತೈವಾನ್ ಸುತ್ತ ಸಮುದ್ರದಲ್ಲಿ ಸುತ್ತುವರಿದಿದ್ದು, ಮಿಲಿಟರಿ ತರಬೇತಿ ನಡೆಸುತ್ತಿದೆ. ತೈವಾನ್‌ನ ಮಿಲಿಟರಿ ದ್ವೀಪದ ಸುತ್ತಮುತ್ತಲಿನ ಸಮುದ್ರದಲ್ಲಿ ನಡೆಯುತ್ತಿರುವ ಚೀನೀ ತರಬೇತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿಯಾಗಿದೆ.

ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಬೆನ್ನಲ್ಲೇ ತೈವಾನ್ ವಿರುದ್ಧ ಚೀನಾ ಪ್ರತೀಕಾರಕ್ಕೆ ಮುಂದಾಗಿದೆ. ಚೀನಾದ 27 ಯುದ್ಧ ವಿಮಾನಗಳು ತೈವಾನ್‌ನ ವಾಯುರಕ್ಷಣಾ ಪ್ರದೇಶವನ್ನು ಪ್ರವೇಶಿಸಿವೆ. ಪೀಪಲ್ಸ್ ಲಿಬರೇಷನ್ ಆರ್ಮಿಯ 27 ಯುದ್ಧ ವಿಮಾನಗಳು ನಮ್ಮ ಪ್ರದೇಶವನ್ನು ಸುತ್ತುವರಿದಿವೆ ಎಂದು ತೈವಾನ್ ರಕ್ಷಣಾ ಇಲಾಖೆ ದೃಢಪಡಿಸಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

ಚೀನಾ ಬೆದರಿಕೆಗೆ ತೈವಾನ್ ಅಧ್ಯಕ್ಷೆ ಸಾಯ್ ಯಿಂಗ್ ವೆನ್ ತಿರುಗೇಟು ಕೊಟ್ಟಿದ್ದಾರೆ. ದೇಶದ 2.3 ಕೋಟಿ ಜನರು ಹೇಡಿಗಳಲ್ಲ. ಚೀನಾದ ಮಿಲಿಟರಿ ಬೆದರಿಕೆಗೆ ನಾವು ಹೆದರುವುದಿಲ್ಲ. ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ತಿರುಗಿಬಿದ್ದಿದ್ದಾರೆ.

ಪೆಲೋಸಿ 24 ಗಂಟೆಗಳಿಗೂ ಕಡಿಮೆ ಅವಧಿಯ ತೈವಾನ್ ಭೇಟಿಯ ಬಳಿಕ ಬುಧವಾರವೇ ದಕ್ಷಿಣ ಕೊರಿಯಾಗೆ ವಿಶೇಷ ವಿಮಾನದಲ್ಲಿ ನಿರ್ಗಮಿಸಿದ್ದಾರೆ. ಈ ನಡುವೆ ಚೀನಾ ತರಬೇತಿಯನ್ನು ಮುಂದುವರೆಸಿದ್ದರೂ ಅದು ಯುದ್ಧ ಮಾಡಲು ಮುಂದಾಗುವುದಿಲ್ಲ ಎಂದು ತೈಪೆಯ ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್

Live Tv

Leave a Reply

Your email address will not be published.

Back to top button