ಬೀಜಿಂಗ್: ಗಂಟೆಗೆ 1 ಸಾವಿರ ಕಿ.ಮೀ. ವೇಗದಲ್ಲಿ ಚಲಿಸುವ ಫ್ಲೈಟ್-ಟ್ರೈನ್ ಮಾದರಿಯನ್ನು ಚೀನಾ ಅನಾವರಣಗೊಳಿಸಿದೆ.
ಚೀನಾದಲ್ಲಿ ಈಗ ಗಂಟೆಗೆ 350 ಕಿ.ಮೀ ವೇಗದಲ್ಲಿ ಕ್ರಮಿಸುವ ಬುಲೆಟ್-ರೈಲು ಇದೆ. ಸುಧೀರ್ಘ ಸಂಶೋಧನೆಯ ನಂತರ ಮುಂದಿನ ಪೀಳಿಗೆಯ ಮ್ಯಾಗ್ನೆಟಿಕ್-ಲೆವಿಟೇಷನ್ ರೈಲುಗಳನ್ನ ತರಲು ಸಿದ್ಧತೆ ನಡೆಸುತ್ತಿದ್ದು, 2025ಕ್ಕೆ ಗಂಟೆಗೆ 1 ಸಾವಿರ ಕಿ.ಮೀ ವೇಗದಲ್ಲಿ ಸಂಚರಿಸುವ ಈ ರೈಲು ಹಳಿಗೆ ಇಳಿಯುವ ಸಾಧ್ಯತೆಯಿದೆ.
Advertisement
ಈ ಹೊಸ ಮಾದರಿಯ ಫ್ಲೈಟ್-ಟ್ರೈನ್ ಮಾದರಿಯನ್ನು ಸಸಿಚ್ವಾನ್ ಪ್ರಾಂತ್ಯದ ಚೆಂಗ್ಡುವಿನಲ್ಲಿ ನಡೆದ 2018 ರ ರಾಷ್ಟ್ರೀಯ ಆವಿಷ್ಕಾರ ಮತ್ತು ಉದ್ಯಮಶೀಲತೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ.
Advertisement
Advertisement
ಈ ಮಾದರಿಯನ್ನ ಚೈನಾ ಏರೋಸ್ಪೇಸ್ ಸೈನ್ಸ್ ಆಂಡ್ ಇಂಡಸ್ಟ್ರಿ ಕಾರ್ಪೊರೇಷನ್ ಲಿಮಿಟೆಡ್ (ಸಿಎಎಸ್‍ಐಸಿ) 2015 ರಿಂದಲೇ ಅಭಿವೃದ್ಧಿ ಪಡಿಸುತ್ತ ಬಂದಿದೆ. ಈ ರೈಲಿನ ವಿಶೇಷತೆ ಏನೆಂದರೆ, 29.2 ಮೀಟರ್ ಉದ್ದ ಮತ್ತು 3 ಮೀಟರ್ ಅಗಲವಿದ್ದು, ಬೆಳಕು ಮತ್ತು ಶಾಖ-ನಿರೋಧಕ ಕ್ಯಾಬಿನ್ ವ್ಯವಸ್ಥೆ ಇರುತ್ತದೆ.
Advertisement
ವಾಕ್ಯೂಮ್ ರೈಲ್ವೇ ಎನ್ವಿರನ್‍ಮೆಂಟ್ ಮತ್ತು ಮ್ಯಾಗ್ನೆಟಿಕ್ ಲೆವಿಟೇಷನ್ ತಂತ್ರಜ್ಞಾನವನ್ನು ಬಳಸಿ ಹಳಿಯ 100 ಮಿಲಿಮೀಟರ್ ಎತ್ತರದಲ್ಲಿ ರೈಲು ಸಂಚರಿಸಲಿದೆ. ಈ ರೈಲು 1,000 ಕಿ.ಮೀ.ಗೆ ನಿಧಾನವಾಗಿ ತನ್ನ ವೇಗವನ್ನ ಹೆಚ್ಚಿಸುತ್ತದೆ ಮತ್ತು ಪ್ರಯಾಣಿಕರು ಆರಾಮವಾಗಿ ಮತ್ತು ಸುರಕ್ಷಿತವಾಗಿರುತ್ತಾರೆಂದು ಸಿಎಎಸ್‍ಐಸಿ ನ ಅಧಿಕಾರಿ ವಾಂಗ್ ಹೇಳಿದ್ದಾರೆ.
ಅಮೆರಿಕದ ಸ್ಪೇಸ್ ಎಕ್ಸ್ ಕಂಪನಿ ಗಂಟೆಗೆ 1 ಸಾವಿರ ಕಿ.ಮಿ ವೇಗದಲ್ಲಿ ಚಲಿಸುವ ಚಲಿಸುವ ಹೈಪರ್ ಲೂಪ್ ಅಭಿವೃದ್ಧಿ ಪಡಿಸುತ್ತಿದೆ. ವಿಶ್ವದಲ್ಲಿ ಚೀನಾದಲ್ಲೇ ಅತಿ ದೊಡ್ಡ ಹೈ ಸ್ಪೀಡ್ ರೈಲಿನ ಜಾಲ ಇದ್ದು ಒಟ್ಟು, ದೇಶದ ಒಳಗಡೆಯೇ 22 ಸಾವಿರ ಕಿ.ಮೀ ಹಳಿಯನ್ನು ಹೊಂದಿದೆ. ಇದನ್ನು ಓದಿ: ಮುಂಬೈ ನಿಂದ ಪುಣೆಗೆ ಜಸ್ಟ್ 25 ನಿಮಿಷ ಸಾಕು- ಹೈಪರ್‍ಲೂಪ್ ಪಡೆಯುವಲ್ಲಿ ಭಾರತವೇ ಮೊದಲ ದೇಶವಾಗೋ ನಿರೀಕ್ಷೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv