ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಹದಿಹರೆಯದವರು ಹೆಚ್ಚಾಗಿ ಮೊಬೈಲ್‍ನಲ್ಲಿ ಇಂಟರ್ನೆಟ್ (Internet In Mobile) ಬಳಕೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಚೀನಾ (China) ದೇಶವು ಹೊಸ ಐಡಿಯಾವೊಂದನ್ನು ಹುಡುಕಿಕೊಂಡಿದೆ.
ಹೌದು. ಚೀನಾದಲ್ಲಿ ರಾತ್ರಿ ವೇಳೆ ಮಕ್ಕಳು ಹಾಗೂ ಹದಿಹರೆಯದವರು ಮೊಬೈಲ್‍ನಲ್ಲಿ ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲು ಮುಂದಾಗಿದೆ. ಈ ಹೊಸ ನಿಯಮ ಸೆಪ್ಟೆಂಬರ್ ತಿಂಗಳಿನಿಂದ ಜಾರಿಗೆ ಬರಲಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
ಚೀನಾದ ಸೈಬರ್‍ಸ್ಪೇಸ್ ಅಡ್ಮಿನಿಸ್ಟ್ರೇಷನ್ (CAC) ಈ ಹೊಸ ನಿಯಮ ಜಾರಿಗೆ ತಂದಿದ್ದು, ಮಕ್ಕಳು ಹಾಗೂ ಯುವಕರನ್ನು ಮೊಬೈಲ್ ಬಳಕೆಯಿಂದ ಹೊರತರುವುದೇ ಇದರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಇದನ್ನೂ ಓದಿ: ಸೌಜನ್ಯಾ ಕೇಸ್ ಮರು ತನಿಖೆಯಾಗ್ಲಿ- ಧರ್ಮಸ್ಥಳದ ಗೌರವ, ಪ್ರತಿಷ್ಠೆಯನ್ನ ಹೇಗಾದ್ರೂ ಕಾಪಾಡ್ತೇವೆ: VHP
Advertisement
Advertisement
ಇಷ್ಟು ಮಾತ್ರವಲ್ಲದೇ ಮೊಬೈಲ್ ಬಳಕೆ ಮಾಡಲು ಕೂಡ ಸಮಯ ನಿಗದಿ ಮಾಡಲಾಗುತ್ತಿದೆ. 8 ವರ್ಷದೊಳಗಿನವರಿಗೆ ದಿನಕ್ಕೆ ಗರಿಷ್ಠ 40 ನಿಮಿಷಗಳು ಹಾಗೂ 16 ರಿಂದ 18 ವರ್ಷದವರಿಗೆ ಗರಿಷ್ಠ 2 ಗಂಟೆ ಮಾತ್ರ ಮೊಬೈಲ್ ಬಳಕೆಗೆ ಅನುಮತಿ ನೀಡಲಾಗುವುದು. ಹಾಗೆಯೇ ಪ್ರತಿ 30 ನಿಮಿಷಕ್ಕೊಮ್ಮೆ ವಿರಾಮ ತೆಗೆದುಕೊಳ್ಳಲು ನೆನಪಿಸಲಾಗುತ್ತದೆ ಎಂದು ಚೀನಾ ಪ್ರಕಟಿಸಿದೆ. ಒಂದು ವೇಳೆ ಪೋಷಕರು ಈ ನಿಯಮ ವಿರೋಧಿಸಿದರೆ ಕೈಬಿಡುವುದಾಗಿಯೂ ತಿಳಿಸಿದೆ.
Web Stories