ಬೀಜಿಂಗ್: ಹಿಮಾಲಯದಲ್ಲಿ ವಿಶ್ವದ ಅತಿದೊಡ್ಡ ಅಣೆಕಟ್ಟು ನಿರ್ಮಾಣ ಮಾಡಲು ಚೀನಾ ಮುಂದಾಗಿದೆ.
ಚೀನಾದಲ್ಲಿ ಯಾರ್ಲುಂಗ್ ತ್ಯಾಂಗ್ಪೋ ಎಂದು ಕರೆಯಲ್ಪಡುವ ಬ್ರಹ್ಮಪುತ್ರಾ ನದಿಗೆ ಮೆಗಾ ಡ್ಯಾಂ ಕಟ್ಟಲು ಯೋಚಿಸಿದೆ. ಇದು 60 ಗಿಗಾವ್ಯಾಟ್ ಸಾಮರ್ಥ್ಯದೊಂದಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಅಣೆಕಟ್ಟಾಗಿರಲಿದೆ. ಈ ಡ್ಯಾಮ್ ಭಾರತಕ್ಕೆ ವಾಟರ್ ಬಾಂಬ್ ಆಗಬಹುದು ಅರುಣಾಚಲ ಪ್ರದೇಶದ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದರು ಮತ್ತು ಇದು ಭಾರತ ಹಾಗೂ ಬಾಂಗ್ಲಾದೇಶದಲ್ಲಿ ನೀರಿನ ಲಭ್ಯತೆ ಹಾಗೂ ಪರಿಸರದ ಮೇಲೆ ಪರಿಣಾಮ ಬೀರುವ ಬಗ್ಗೆ ಕಳವಳ ಉಂಟಾಗಿದೆ.
ಬ್ರಹ್ಮಪುತ್ರ ನದಿಯು ಟಿಬೆಟ್‌ನಿಂದ ಹರಿದು ಭಾರತವನ್ನು ಪ್ರವೇಶಿಸುತ್ತದೆ. ಕೃಷಿ, ಮೀನುಗಾರಿಕೆ ಮತ್ತು ದೈನಂದಿನ ನೀರಿನ ಅಗತ್ಯಗಳಿಗಾಗಿ ಅವಲಂಬಿಸಿರುವ ಲಕ್ಷಾಂತರ ಜನರಿಗೆ ಜೀವನಾಡಿಯಾಗಿದೆ. ಈ ಯೋಜನೆಯಿಂದಾಗಿ ಈ ಜಲಾನಯನ ಪ್ರದೇಶದ ಜನರನ್ನು ಬಲವಂತವಾಗಿ ಎತ್ತಂಗಡಿ ಮಾಡಿಸುವ ಆತಂಕವೂ ಶುರುವಾಗಿದೆ. ಚೀನಾವನ್ನು ನಂಬಲು ಕಷ್ಟ. ಅಷ್ಟು ದೊಡ್ಡ ಪ್ರಮಾಣದ ಡ್ಯಾಂನಲ್ಲಿ ನೀರು ತಡೆಹಿಡಿಯುವುದರಿಂದ ಅರುಣಾಚಲ ಪ್ರದೇಶದ ವಿಶಾಲ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಬಹುದು ಅಂತಲೂ ಎಚ್ಚರಿಸಲಾಗಿದೆ.

