ಬೀಜಿಂಗ್: ನೆರೆಯ ದೇಶ ಚೀನಾ, ಪರಮಾಣು ಕ್ಷಿಪಣಿ ಪರೀಕ್ಷೆ ಮಾಡಿದೆ. 10 ಪರಮಾಣು ಸಿಡಿತಲೆಗಳನ್ನ ಹೊತ್ತೊಯ್ಯಬಲ್ಲ ಡಿಎಫ್ – 5ಸಿ ಕ್ಷಿಪಣಿಯನ್ನ ಚೀನಾ ಪರೀಕ್ಷೆ ಮಾಡಿದೆ.
ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಶುರುವಾದ ತಕ್ಷಣ ಕಳೆದ ತಿಂಗಳು, ಚೀನಾದ ಶಾಂಕ್ಷಿ ಪ್ರಾಂತ್ಯದ ತೈಯುವಾನ್ ಬಾಹ್ಯಾಕಾಶ ಉಡವಾಣಾ ಕೇಂದ್ರದಲ್ಲಿ ಡೊಂಗ್‍ಫೆಂಗ್ – 5ಸಿ ಕ್ಷಿಪಣಿಯಲ್ಲಿ ಡಮ್ಮಿ ಪರಮಾಣು ಸಿಡಿತಲೆಗಳನ್ನ ಪರೀಕ್ಷೆ ಮಾಡಿದೆ ಅಂತ ಅಮೆರಿಕಾ ಗುಪ್ತಚರ ಸಂಸ್ಥೆಗಳು ಮಾಹಿತಿ ಕಲೆ ಹಾಕಿವೆ.
Advertisement
ವ್ಯಾಪಾರ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ನೆಲೆಯ ವಿಚಾರದಲ್ಲಿ ಟ್ರಂಪ್ ಚೀನಾ ವಿರುದ್ಧ ಕಠಿಣ ನಿಲುವು ತಳೆಯಬಹುದು ಎಂಬ ಸಂಕೇತ ಬರುವಾಗಲೇ ಚೀನಾ ಈ ಪರೀಕ್ಷೆ ನಡೆಸಿದೆ. ಸದ್ಯ ಚೀನಾ ಬಳಿ 250ರಷ್ಟು ಪರಮಾಣು ಬಲ ಇರೋದಾಗಿ ಅಮೆರಿಕಾ ಅಂದಾಜಿಸಿದೆ.
Advertisement
ಈ ನಡುವೆ ಪಾಕಿಸ್ತಾನ ಸರ್ಕಾರ ಗೃಹ ಬಂಧನದಲ್ಲಿರೋ ಉಗ್ರ ಹಫೀಜ್ ಸಯೀದ್‍ನನ್ನ ನಿರ್ಗಮ ನಿಯಂತ್ರಣ ಪಟ್ಟಿಗೆ ಸೇರ್ಪಡೆ ಮಾಡಿದೆ. ದೇಶ ಬಿಟ್ಟು ತೆರಳದಂತೆ ತಡೆದಿರೋ ಈ ಕಾನೂನಿನಿಂದ ಇತರೆ ಉಗ್ರರಿಗೂ ಶಾಕ್ ಆಗಿದೆ.