ನವದೆಹಲಿ: ಒಂದು ಕಡೆ ಶಾಂತಿ ಮಾತುಕತೆ ನಡೆಸುತ್ತಿರುವ ಡ್ರ್ಯಾಗನ್ ದೇಶ ಚೀನಾ, ಮತ್ತೊಂದು ಕಡೆ ಕಾಲ್ಕೇರದು ಜಗಳಕ್ಕೆ ಬರುತ್ತಿದೆ. ಭಾರತವನ್ನು ಪ್ರಚೋದಿಸಲು ಚೀನಾ ವಾಯುಸೇನೆ ಪ್ರಯತ್ನ ನಡೆಸುತ್ತಿದ್ದು ಎಲ್‌ಎಸಿ(ವಾಸ್ತವ ಗಡಿ ನಿಯಂತ್ರಣ ರೇಖೆ) ಬಳಿ ಯುದ್ಧ ವಿಮಾನಗಳನ್ನು ಹಾರಿಸಲಾಗುತ್ತಿದೆ.
ಚೀನಾದ ವಾಯುಪಡೆಯ ಯುದ್ಧ ವಿಮಾನಗಳು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ಎಲ್‌ಎಸಿ ತುಂಬಾ ಹತ್ತಿರದಲ್ಲಿ ಹಾರುತ್ತಿವೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ. ಚೀನಾದ ಚಟುವಟಿಕೆಗಳನ್ನು ಭಾರತೀಯ ವಾಯು ಸೇನೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಚೀನಾದ ಯುದ್ಧ ವಿಮಾನಗಳ ಸಂಭವನೀಯ ಬೆದರಿಕೆಯನ್ನು ನಿಭಾಯಿಸಲು ಸುಧಾರಿತ ನೆಲೆಗಳಲ್ಲಿ ಅನೇಕ ಯುದ್ಧ ವಿಮಾನಗಳನ್ನು ಸಿದ್ದವಾಗಿರಿಸಿದೆ ಎಂದು ಹಿರಿಯ ಸೇನಾ ಅಧಿಕಾರಿಗಳು ಹೇಳಿದ್ದಾರೆ.
Advertisement
Advertisement
ಜೂನ್ ತಿಂಗಳ ಕಡೆಯ ವಾರದಲ್ಲೂ ಚೀನಾ ಇಂತಹದೇ ಪ್ರಯತ್ನ ಮಾಡಿ ಭಾರತವನ್ನು ಕೆಣಕುವ ಪ್ರಯತ್ನ ಮಾಡಿತ್ತು. ಎಲ್‌ಎಸಿ ಬಳಿ ಯುದ್ಧ ವಿಮಾನ ಹಾರಾಟ ನಡೆಸಿತ್ತು, ಇದಕ್ಕೆ ಪ್ರತಿಯಾಗಿ ಭಾರತ ತನ್ನ ಯುದ್ಧ ವಿಮಾನಗಳ ಹಾರಾಟ ನಡೆಸಿದ ಬಳಿಕ ಚೀನಾ ತೆಪ್ಪಾಗಾಗಿತ್ತು. ಇದನ್ನೂ ಓದಿ: ಬ್ಯಾಂಕ್ ಮುಂದೆ ಪ್ರತಿಭಟನೆ – ಜನರನ್ನು ಚದುರಿಸಲು ಯುದ್ಧ ಟ್ಯಾಂಕರ್ ನಿಲ್ಲಿಸಿದ ಚೀನಾ
Advertisement
ಭಾರತ ಮತ್ತು ಚೀನಾದ ನಡುವೆ ಗಡಿಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ 16 ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಗಳು ನಡೆಯುತ್ತಿರುವ ಹೊತ್ತಲ್ಲೇ ಚೀನಾ ಈ ಉದ್ಧಟತನ ಮಾಡಿದೆ.