ನವದೆಹಲಿ: `ಗಡಿ ಭಾಗದಲ್ಲಿ ಚೀನಾಗೆ (China) ಪ್ರಧಾನಿ ಮೋದಿಯವರು (Narendra Modi) ಹೋರಾಟವಿಲ್ಲದೇ ಭೂಪ್ರದೇಶವನ್ನು ಬಿಟ್ಟುಕೊಟ್ಟಿದ್ದಾರೆ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಟೀಕೆಗೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ (S Jaishankar) ತಿರುಗೇಟು ನೀಡಿದ್ದು, `ಚೀನಾ 1962ರಲ್ಲೇ ಆ ಭೂಮಿಯನ್ನ ಆಕ್ರಮಿಸಿತ್ತು’ ಎಂದು ಹೇಳಿದ್ದಾರೆ.
Advertisement
ಕೆಲವರು ರಾಜಕೀಯಕ್ಕಾಗಿ ಚೀನಾ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. 1962ರ ಚೀನಾ ಗಡಿ ಸಮಸ್ಯೆ ಇತ್ತೀಚೆಗೆ ಆರಂಭವಾಗಿದ್ದು ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement
`ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 100 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಾಕ್ಕೆ ಹೋರಾಟವಿಲ್ಲದೇ ನೀಡಿದ್ದಾರೆ. ಅದನ್ನು ಹೇಗೆ ಹಿಂಪಡೆಯುತ್ತಾರೆ?’ ಎಂದು ರಾಹುಲ್ ಗಾಂಧಿ ಸರ್ಕಾರವನ್ನು ಪ್ರಶ್ನಿಸಿದ್ದರು. ಅಲ್ಲದೇ ಇತ್ತೀಚೆಗೆ ನಟ, ರಾಜಕಾರಣಿ ಕಮಲ್ ಹಾಸನ್ (Kamal Hassan) ಅವರೊಂದಿಗಿನ ಸಂವಾದದಲ್ಲಿಯೂ ರಾಹುಲ್ ಮತ್ತೊಮ್ಮೆ ಚೀನಾವು ಭಾರತದ 2,000 ಚದರ ಮೀಟರ್ ಭೂಪ್ರದೇಶ ಆಕ್ರಮಿಸಿಕೊಂಡಿದೆ. ಆದರೂ ನಮ್ಮ ಪ್ರಧಾನಿ ಮೋದಿ ಏನನ್ನೂ ಹೇಳಲಿಲ್ಲ’ ಎಂದು ಟೀಕಿಸಿದ್ದರು.
Advertisement
Advertisement
ಇದಕ್ಕೆ ಜೈಶಂಕರ್ ತಿರುಗೇಟು ನೀಡಿದ್ದು, `ಚೀನಾ ಭೂಪ್ರದೇಶ ಆಕ್ರಮಣ ಬಗ್ಗೆ ಮಾತನಾಡುವಾಗ ಅವರು ಸತ್ಯ ಹೇಳುವುದಿಲ್ಲ. ಆ ಘಟನೆ ನಿನ್ನೆ ಆಗಿದೆ ಎಂಬ ಭಾವನೆ ಬರುವಂತೆ ಮಾತನಾಡುತ್ತಾರೆ. ಅಂತಹ ಜನರು ಉದ್ದೇಶಪೂರ್ವಕವಾಗಿ ಚೀನಾದ ಬಗ್ಗೆ ತಪ್ಪು ಮಾಹಿತಿ ಹರಡುತ್ತಾರೆ ಎಂದು ಜೈಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕೋವಿಡ್ ಹಾವಳಿ – ಮೊದಲ ಬಾರಿಗೆ ಕೊರೊನಾ ಬಗ್ಗೆ ಜಿನ್‌ಪಿಂಗ್ ಮಾತು
ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೇಕೆ ದೇಶದ ಬಗ್ಗೆ ವಿಶ್ವಾಸವಿಲ್ಲ? ಏಕೆ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ? ಚೀನಾದ ಬಗ್ಗೆ ಏಕೆ ತಪ್ಪು ಮಾಹಿತಿಗಳನ್ನೇ ಹರಡುತ್ತಾರೆ. ಈ ಪ್ರಶ್ನೆಗಳಿಗೆ ನಾನು ಹೇಗೆ ಉತ್ತರಿಸಲಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಶಿಕ್ಷಣಕ್ಕೆ ನಿಷೇಧ – ವಿದ್ಯಾರ್ಥಿನಿಯರಿಗೆ ಯುನಿವರ್ಸಿಟಿ ಪ್ರವೇಶ ಪರೀಕ್ಷೆಗೆ ಅವಕಾಶವಿಲ್ಲ ಎಂದ ತಾಲಿಬಾನ್
ಬಹುತೇಕ ವಿದೇಶಿ ಮಾಧ್ಯಮಗಳು ಭಾರತ ಸರ್ಕಾರವನ್ನು `ಹಿಂದೂ ರಾಷ್ಟ್ರೀಯವಾದಿ’ (Hindu Nationalist) ಎಂದು ಉಲ್ಲೇಖಿಸುತ್ತವೆ. ಆದರೆ ಅಮೆರಿಕ ಹಾಗೂ ಇತರ ಯುರೋಪ್ ರಾಷ್ಟ್ರಗಳ ಸರ್ಕಾರಗಳನ್ನು ಅವರು `ಕ್ರಿಶ್ಚಿಯನ್ ರಾಷ್ಟ್ರವಾದಿ’ ಎಂದೇಕೆ ಕರೆಯುವುದಿಲ್ಲ? ಬಹುತೇಕ ವಿದೇಶಿ ಮಾಧ್ಯಮಗಳು ಧರ್ಮ ವಿಶ್ಲೇಷಣೆ ಪದಗಳನ್ನ ಭಾರತಕ್ಕೆ ಮಾತ್ರ ಸಿಮೀತಗೊಳಿಸಿವೆ. ಆದರೆ ಭಾರತ ಇಡೀ ವಿಶ್ವಕ್ಕಾಗಿ ಹೆಚ್ಚಿನದನ್ನು ಮಾಡಲು ಬಯಸುತ್ತದೆ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ ಎಂದು ಜೈಶಂಕರ್ ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k